ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ ಭಾಗವಾಗಿ ನಿರ್ಮಾಣಗೊಂಡ ಬಹುನಿರೀಕ್ಷೆಯ ಕಲ್ಲಡ್ಕ ಪ್ಲೈ ಓವರ್ ಇಂದಿನಿಂದ ವಾಹನ ಸಂಚಾರಕ್ಕೆ ತೆರೆದುಕೊಂಡಿದೆ.
ಇಂದಿನಿಂದ ಮಾಣಿ ಭಾಗದಿಂದ ಬಿ.ಸಿ.ರೋಡಿನತ್ತ ಆಗಮಿಸಲಿರುವ ವಾಹನಗಳು ಸಂಚರಿಸಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಎರಡೂ ಬದಿಯ ಸಂಚಾರ ಆರಂಭಗೊಳ್ಳಲಿದೆ.
ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಜೂ. 2ರಿಂದ ಸಂಚಾರ ಆರಂಭಗೊಳ್ಳುವ ಕುರಿತು ಈಗಾಗಲೇ ದ.ಕ ಸಂಸದ ಬ್ರಿಜೇಶ್ ಚೌಟ ಅವರು ಅಧಿಕೃತ ಹೇಳಿಕೆ ನೀಡಿದ್ದರು. ಫ್ಲೈಓವರ್‌ನಲ್ಲಿ ವಾಹನ ಸಂಚಾರದ ಬಳಿಕ ಬಾಕಿ ಉಳಿದಿರುವ ಸರ್ವೀಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿ ನಡೆಯಲಿದೆ ಎಂದು ಎನ್‌ಎಚ್‌ಎಐ ಮೂಲಗಳು ತಿಳಿಸಿದೆ.