ಸಾಮಾಜಿಕ ಜಾಲತಾಣದಲ್ಲಿ ಅಡುಗೆ ಸಿಲಿಂಡರ್ ಒಂದು ಸ್ಪೋಟಗೊಂಡ ವಿಡಿಯೋ ವೈರಲ್ ಆಗಿದೆ. ಮನೆಯೊಂದರಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸದ್ಯ ವೈರಲ್ ಆಗಿದೆ. ಘಟನೆ ಸಿಸಿಟಿವಿಯ ಸಮಯದ ಪ್ರಕಾರ ಜೂನ್ 18 ರಂದು ನಡೆದಿದೆ ಎಂದು ಹೇಳಲಾಗಿದ್ದು, ಎಲ್ಲಿ ನಡೆದಿದೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಈ ವಿಡಿಯೋ ಮಾತ್ರ ಎಲ್ಲರಿಗೂ ಶಾಕ್ ನೀಡಿದೆ. ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿದೆ. ಈ ವೇಳೆ ಮಹಿಳೆಯೊಬ್ಬರು ಸಿಲಿಂಡರನ್ನು ಅಡುಗೆ ಮನೆಯಿಂದ ಮನೆಯ ಹಾಲ್ ಗೆ ತಂದಿದ್ದಾರೆ. ಈ ವೇಳೆಯೂ ಸಿಲಿಂಡರ್ ಸೋರಿಕೆಯಾಗುತ್ತಲೆ ಇತ್ತು, ಮಹಿಳೆ ಸೋರಿಕೆಯ ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಆಗದ ಕಾರಣ ಸಿಲಿಂಡರ್ ನ್ನು ಬಿಟ್ಟು ಮನೆಯಿಂದ ಹೊರಕ್ಕೆ ತೆರಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಇನ್ನೊಬ್ಬರ ಜೊತೆ ಮಹಿಳೆ ಮನೆಗೆ ಆಗಮಿಸಿದ್ದಾರೆ.ಈ ವೇಳೆ ಸಿಲಿಂಡರ್ ಸೊರಿಕೆ ಸಂಪೂರ್ಣವಾಗಿ ನಿಂತಿತ್ತು. ಈ ಹಿನ್ನಲೆ ಮಹಿಳೆ ಮತ್ತು ಮತ್ತೊಬ್ಬ ಯುವಕ ಮನೆಯ ಹಾಲ್ ಗೆ ಬರುತ್ತಾರೆ. ಬಂದು ಸಿಲಿಂಡರ್ ಪರಿಶೀಲನೆ ನಡೆಸುವ ವೇಳೆ ಏಕಾಏಕಿ ಅಡುಗೆ ಮನೆಯಿಂದ ಬೆಂಕಿ ಕಾಣಿಸಿಕೊಂಡು , ಕ್ಷಣದಲ್ಲಿ ಇಡೀ ಮನೆ ಬೆಂಕಿ ಆವರಿಸಿಕೊಂಡಿದೆ. ಆದರೆ ಪವಾಡ ಸದೃಶವಾಗಿ, ಇಬ್ಬರೂ ವ್ಯಕ್ತಿಗಳು ಸ್ಫೋಟದಿಂದ ಬದುಕುಳಿದರು. ಮಹಿಳೆ ಮೊದಲು ತೆರೆದಿಟ್ಟಿದ್ದ ಬಾಗಿಲುಗಳು ಮತ್ತು ಕಿಟಕಿಗಳು ಕೋಣೆಯನ್ನು ಗಾಳಿ ಬೀಸಲು ಸಹಾಯ ಮಾಡಿ ಹೆಚ್ಚು ದುರಂತ ಅಪಘಾತವನ್ನು ತಪ್ಪಿಸಿದವು ಎಂದು ನಂಬಲಾಗಿದೆ. ಸಿಸಿಟಿವಿಯ ವಿಡಿಯೋದಲ್ಲಿ ಈ ಘಟನೆ ರೆಕಾರ್ಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
