ಪ್ರೀತಿಸಿದ್ದ ಪ್ರಿಯತಮೆಯನ್ನು ಕೊಲೆ ಮಾಡಿ ಆ ನಂತರ ಶವಕ್ಕೆ ತಾಳಿ ಕಟ್ಟಿ ವಿಕೃತಿ ಮೆರೆದ ವಿಚಿತ್ರ ಘಟನೆ ಮೈಸೂರಿನಲ್ಲಿ ನಡೆದಿದ್ದು, 36 ವರ್ಷದ ಪೂರ್ಣಿಮಾ ಎಂಬ ಯುವತಿಯನ್ನು ಕೊಲೆಗೈದ ಪ್ರಿಯಕರ ಬಳಿಕ ತಾಳಿಕಟ್ಟಿದ ಘಟನೆ ಮೈಸೂರಿನ ಆಶೋಕಪುರಂನಲ್ಲಿ ನಡೆದಿದೆ.
ತಾನು ಪ್ರಾಮಾಣಿಕವಾಗಿ ಪ್ರೀತಿಸಿದ್ದು, ಇಷ್ಟಾದರೂ ತನ್ನ ಪ್ರೀತಿಯನ್ನು ಸ್ವೀಕರಿಸಲಿಲ್ಲ ಎಂಬ ಕಾರಣಕ್ಕೆ ಅಭಿಷೇಕ್ ಎಂಬಾತ ಪೂರ್ಣಿಮಾ ಎಂಬ ಯುವತಿಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದಾನಂತೆ.
ಈ ವೇಳೆ ಆಕೆ ದಾಳಿಯಿಂದ ತತ್ತರಿಸಿ ಪ್ರಜ್ಞೆ ತಪ್ಪಿ ಬಿದ್ದಾಗ, ಆಕೆಯ ಕುತ್ತಿಗೆಗೆ ತಾಳಿ ಕಟ್ಟಿದ ಆರೋಪಿ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರಿಯತಮೆಯ ಜೊತೆಗೆ ಸೆಲ್ಫಿಯೂ ತೆಗೆದುಕೊಂಡಿದ್ದು ಆ ಫೋಟೋ ಕೂಡ ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದ್ದಾನೆ. ಆದ್ರೆ ತೀವ್ರವಾಗಿ ಗಾಯಗೊಂಡಿದ್ದ ಯುವತಿ ಪೂರ್ಣಿಮಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.


