ಅಧ್ಯಕ್ಷರಾಗಿ ಶ್ರೀಮತಿ ಮಂಜುಳಾ, ಉಪಾಧ್ಯಕ್ಷರಾಗಿ ಹಸೈನಾರ್ ಜಯನಗರ ಆಯ್ಕೆ

Nammasullia: ಸುಳ್ಯ ಸರ್ಕಾರಿ ಜೂನಿಯರ್ ಕಾಲೇಜ್ ಇದರ ನೂತನ ಎಸ್ ಡಿ ಎಮ್ ಸಿ ಸಮಿತಿ ರಚನೆ ಜುಲೈ 5 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಸುಳ್ಯ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಅತ್ಯಂತ ಜನಪ್ರಿಯ ಶಾಲೆಯಾಗಿದೆ ಈ ಜೂನಿಯರ್ ಕಾಲೇಜು ಒಂದು, ಅತೀ ಹೆಚ್ಚು ಜನ ವಿದ್ಯಾರ್ಜನೆಗೈದ ಹಾಗೂ ವಿದ್ಯಾರ್ಜನೆಗೈಯುತ್ತಿರುವ ಕಾಲೇಜು ಕೂಡಾ ಇದಾಗಿದೆ.

ನೂತನ ಶೈಕ್ಷಣಿಕ ಸಾಲಿನ 8,9,ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಯನ್ನು ಕರೆದು ನೂತನ ಸಾಲಿನ ಎಸ್ಡಿಎಂಸಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಬಳಿಕ ಸದಸ್ಯರ ಸಭೆಯನ್ನು ಕರೆದು ಈ ಸಭೆಯಲ್ಲಿ ಎಸ್ಡಿಎಂಸಿ ಸಮಿತಿಯನ್ನು ರಚಿಸಿ
ನೂತನ ಸಾಲಿನ ಅಧ್ಯಕ್ಷರಾಗಿ ಶ್ರೀಮತಿ ಮಂಜುಳಾ ಬಿ ಬಡಿಗೇರ್ ರವರು ಆಯ್ಕೆಗೊಂಡು ಉಪಾಧ್ಯಕ್ಷರಾಗಿ ಹಸೈನಾರ್ ಜಯನಗರ ಆಯ್ಕೆ ಯಾದರು.

ಸದಸ್ಯರುಗಳಾಗಿ ರಮೇಶ ಕೆ, ಶ್ರೀಮತಿ ಜಯಶ್ರೀ, ಶ್ರೀಮತಿ ವಿಶಾಲ ಸೀತಾರಾಮ ಕರ್ಲಪ್ಪಾಡಿ, ಚಿದಾನಂದ ಜಿ, ಸುಭಾಷ್ ಚಂದ್ರ,ಅಹಮದ್ ಕಬೀರ್, ಹಾಗೂ ರಾಜೇಶ್ ರೈ ಬಿ ಆಯ್ಕೆಯಾದರು.

ಶಾಲಾ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತಾಯ ಹಾಗೂ ಶಿಕ್ಷಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *