ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾಗಿದ್ದು, ಈಗಾಗಲೇ ರೆಡ್ ಅಲೆರ್ಟ್ ಘೋಷಿಸಿದೆ. ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲೂ ಮಳೆಯ ರೌದ್ರನರ್ತನ ಹೆಚ್ಚಾಗಿದ್ದು ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ. ಸುಳ್ಯದ ಜಟ್ಟಿಪಳ್ಳ ತಿರುವಿನ ಬಳಿಯಿರುವ ಪೂಜಾ ಹೋಟೆಲ್ ಗೆ ನೀರು ನುಗ್ಗಿದ್ದು ನೆರೆ ಪರಿಸ್ಥಿತಿ ಬಂದೊದಗಿದೆ.