ಅಡ್ಪಂಗಾಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಸಮಿತಿ ರಚನಾ ಸಭೆ ಜು. 13 ರಂದು ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಬ್ಬಾಸ್ ಎ ಬಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯ ವಿದ್ಯಾರ್ಥಿ ಸಂಘದ ಸಭೆ ಕರೆದು ನೂತನ ವಿದ್ಯಾರ್ಥಿ ಸಂಘವನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ರಾಹುಲ್ ಅಡ್ಪಂಗಾಯ, ಪ್ರ. ಕಾರ್ಯದರ್ಶಿ ವಿನೋದ್ ಮಾವಿನಪಲ್ಲ, ಕೋಶಾಧಿಕಾರಿ ಗೌರೀಶ್ ಅಡ್ಪಂಗಾಯ, ಉಪಾಧ್ಯಕ್ಷರಾಗಿ ಇಲ್ಯಾಸ್ ಎಂ, ಕಾರ್ಯದರ್ಶಿ ಸಲೀಂ ಎಂ ಎ, ಕ್ರೀಡಾ ಹಾಗೂ ಸಂಸ್ಕೃತಿ ಪ್ರತಿನಿಧಿ ಮುರಳಿ ಮಾವಿನಪಲ್ಲ, ಸದಸ್ಯರಗಳಾಗಿ ಹಸೈನಾರ್ ಹಾಜಿ ಗೊರಡ್ಕ ವಸಂತ, ಎ ಬಿ ಅಶ್ರಫ್ ಸಅದಿ, ಪವಿತ್ರ, ಅಬೂಬಕ್ಕರ್. ಐ.ಎಂ, ಸುಂದರ ಅಡ್ಪಂಗಾಯ, ಉಮ್ಮರ್ ಬಂಟ್ರಬೈಲು, ಗೀತಾ ಅಡ್ಪಂಗಾಯ, ಮಿಸ್ರಿಯ.ಲ, ಅಬ್ಬಾಸ್.ಎ ಬಿ, ಅಬ್ದುಲ್ ಲತಿಫ್ ಮಾವಿನಪಲ್ಲ, ರಮ್ಲಾ ಮಾವಿನಪಲ್ಲ, ಆಯ್ಕೆಯಾದರು.
ವೇದಿಕೆಯಲ್ಲಿ ಮುಖ್ಯಗುರುಗಳಾದ ಶ್ರೀಮತಿ ಸುರೇಖಾ ರೈ.ಡಿ, ಹಿರಿಯ ವಿದ್ಯಾರ್ಥಿ ಸಂಘದ ನಿಕಟ ಪೂರ್ವ ಅಧ್ಯಕ್ಷ ಹಸೈನಾರ್ ಹಾಜಿ ಗೋರಡ್ಕ, ಹಿರಿಯ ಶಿಕ್ಷಕಿ ನರ್ಮದ ಎಂ, ಹಾಗೂ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


