ಮುಹಿಯದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಇದರ ಆಶ್ರಯದಲ್ಲಿ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಮುಅಲ್ಲಿಮ್ ಡೇ ಕಾರ್ಯಕ್ರಮವು ದಿನಾಂಕ 13/07/25 ಆದಿತ್ಯವಾರ ಬಹಳ ವಿಜೃಂಭಣೆ ಯಿಂದ ನಡೆಸಲಾಯಿತು. ಎಂ ಜೆ. ಎಂ. ಕಲ್ಲುಗುಂಡಿ ಇದರ ಖತೀಬ್ ಜನಾಬ್ ನಾಸಿರ್ ದಾರಿಮಿ ಉಸ್ತಾದ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಮಸೀದಿ ಅಧ್ಯಕ್ಷರಾದ ಜನಾಬ್ ಎಸ್. ಆಲಿ ಹಾಜಿಯವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.ಖತೀಬ್ ಉಸ್ತಾದರು ವಿದ್ಯಾರ್ಥಿಗಳ ಜೀವನದಲ್ಲಿ ಮುಅಲ್ಲಿಮರ ಪಾತ್ರದ ಬಗ್ಗೆ ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಕಮಿಟಿ ಉಪಾಧ್ಯಕ್ಷರಾದ ಜನಾಬ್ ತಾಜ್ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಪಿ. ಎಂ. ಇರ್ಷಾದ್ ಬದ್ರಿಯಾ, ಕಾರ್ಯದರ್ಶಿ ಮಹಮ್ಮದ್ ಹನೀಫ್ ಎಸ್. ಎ, ಸದಸ್ಯರಾದ ಅಶ್ರಫ್ ಹಸೈನಾರ್, ಮದರಸ ಸದರ್ ಮುಅಲ್ಲಿಮ್ ಉಸ್ತಾದ್ ಜನಾಬ್ ಸಈದ್ ಫೈಝಿ, ಮುಅಲ್ಲಿಮ್ ಉಸ್ತಾದ್ ರುಗಳಾದ ಇಬ್ರಾಹಿಂ ವಹ್ಬಿ, ಶಿಯಾಬ್ ಫೈಝಿ ಉಸ್ತಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮ ದ ಪ್ರಯುಕ್ತ ಮಜ್ಲಿಸುನ್ನೂರ್ ಪಾರಾಯಣ ನಡೆಯಿತು. ಸಮಸ್ತ ಸ್ಥಾಪನ ದಿನಾಚರಣೆ ಹಾಗೂ ಮುಅಲ್ಲಿಮ್ ಡೇ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆಸಿದ್ದ ಕ್ವಿಜ್ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಸ್ಮರಣಿಕೆ ನೀಡಿ ಪ್ರೋತ್ಸಾಹ ನೀಡಲಾಯಿತು. ತದ ನಂತರ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಉಸ್ತಾದರುಗಳಿಗೆ ಪಾರಿತೋಷಕ ನೀಡಿ ಗೌರವಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ವಿತರಣೆ ಹಾಗೂ ದುಆ ನಡೆಸಲಾಯಿತು. ಸದರ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು.


