ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವದ ಅಂಗವಾಗಿ ಸಭಾ ಭವನ ನಿರ್ಮಾಣ ವಾಗಲಿರುವ ಹಿನ್ನಲೆ ಯಲ್ಲಿ ಶಾಲಾ ವಠಾರದಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಗೊಳಿಸಿ ಕೊಡುವಂತೆ ಜು 19 ರಂದು ಕಾಲೇಜು ವತಿಯಿಂದ ಸುಳ್ಯ ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿ ವಿನಂತಿಸಿಕೊಂಡರು.

ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಸ್ಥಾಪನೆಗೊಂಡು ಈ ವರ್ಷ 2025ಕ್ಕೆ ಭರ್ತಿ 75 ವರ್ಷ ಪೂರ್ಣಗೊಂಡಿರುವುದರಿಂದ ಈ ವರ್ಷ ಸಂಸ್ಥೆಯು ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳಲಿದೆ. ಇದರ ಸವಿನೆನಪಿಗಾಗಿ ದೊಡ್ಡದಾದ ಹಾಗೂ ಸುಂದರವಾದ ಸಭಾಭವನ ನಿರ್ಮಾಣ ಮಾಡುವುದೆಂದು ಯೋಜನೆ ಹಾಕಿಕೊಳ್ಳಲಾಗಿದೆ.
ಆದುದರಿಂದ ಕಾಲೇಜ್ ಗೆ ಸಂಬಂದಿಸಿದ ಜಾಗದಲ್ಲಿ ಸುಮಾರು 40 ವರ್ಷ ಗಳ ಹಿಂದೆ ನೆಟ್ಟು ಬೆಳೆಸಿದ ಅಕೇಶಿಯಾ ಮರಗಳು ಅವಧಿ ಮೀರಿರುತ್ತದೆ. ಅಲ್ಲದೇ ಸದ್ರಿ ಜಾಗದಲ್ಲಿ ವಿದ್ಯುತ್ ಎಚ್ ಟಿ ಲೈನ್ ಗಳು ಹಾದು ಹೋಗುವುದರಿಂದ ಅಪಾಯಕಾರಿ ಸ್ಥಿತಿ ಯಲ್ಲಿದ್ದು ಇದನ್ನು ತೆರವು ಗೊಳಿಸಬೇಕೆಂದು, ಕಾಲೇಜು ಸ್ಟಾಫ್ ಕೌನ್ಸಿಲ್, ಅಮೃತ ಮಹೋತ್ಸವ ಸಮಿತಿ ಮತ್ತು ಎಸ್ ಡಿ ಎಂ ಸಿ ವತಿಯಿಂದ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ ಯವರಿಗೆ ಮತ್ತು ವಲಯ ಅರಣ್ಯಾಧಿಕಾರಿ ಮಂಜುನಾಥ್ ರವರಿಗೆ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಶಾಲಾ ಪ್ರಾಂಶುಪಾಲರಾದ ಮೋಹನ್ ಕುಮಾರ್, ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಹಸೈನಾರ್ ಜಯನಗರ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ್ ರೈ, ಅಮೃತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ ಬಿ ಸದಾಶಿವ, ಸಂಘಟನಾ ಕಾರ್ಯದರ್ಶಿ ಕೆ ಎಂ ಮುಸ್ತಫಾ ಜನತಾ ರವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *