ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಅವರಿಂದ 50ಕ್ಕೂ ಹೆಚ್ಚು ಮದ್ರಸಾ ಅಧ್ಯಾಪಕರಿಗೆ ಉಡುಗೊರೆ ವಿತರಣೆ
ಸುಳ್ಯ: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ನಿರ್ದೇಶನದಂತೆ ಸುಳ್ಯ ರೇಂಜ್ ಸಮಿತಿ ವತಿಯಿಂದ ‘ ಮುಅಲ್ಲಿಂ ಡೇ ‘ ಕಾರ್ಯಕ್ರಮವನ್ನು ನಡೆಸಲಾಯಿತು. ಗುರುಂಪು ಸುಪ್ರೀಂ ಹಾಲ್‌ನಲ್ಲಿ ಸುಳ್ಯ ರೇಂಜ್ ಮದ್ರಸಾ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ತಾಜ್ ಮುಹಮ್ಮದ್ ಸಂಪಾಜೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಮುಹಮ್ಮದ್ ಮುಂಡೋಳೆ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ,ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕ್ಕಾಧ್ಯಕ್ಷ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ, ಮುಅಲ್ಲಿಂಮರು ಸಮಾಜದ ಧಾರ್ಮಿಕತೆಯ ಬೆಳವಣಿಗೆಗೆ ಬಹಳ ಉತ್ತಮವಾಗಿ ಕಾರ್ಯಾಚರಿಸುತ್ತಿದ್ದು, ಸಮಾಜ ಅವರನ್ನು ಗೌರವದಿಂದ ಗುರುತಿಸಬೇಕಾಗಿದೆ,ಅದೇ ರೀತಿ, ಮುಅಲ್ಲಿಮರು ಕೂಡಾ ಹೊರ ಜಗತ್ತಿನ ಹಾಗು ಹೋಗುಗಳು ಸಾಧ್ಯತೆಗಳನ್ನು ಸಮರ್ಪಕವಾಗಿ ತಿಳಿದು ಅದನ್ನು ಉಪಯೋಗಿಸುವ ರೀತಿ ನೀತಿಗಳ ಕುರಿತು ಆಲೋಚಿಸಬೇಕು ಎಂದು ಕರೆ ನೀಡಿ ಜಮಾತ್ ಅದೀನದಲ್ಲಿರುವ ವಿದ್ಯಾರ್ಥಿಗಳ ಯುವಕರ ಹದಿಹರೆಯದ ಜನರನ್ನು ಸಮುದಾಯದ ಬೆಳವಣಿಗೆ ಮತ್ತು ಸಮುದಾಯಕ್ಕೆ ಉಪಯೋಗವಾಗುವಂತೆ ಸಮಾಜದಲ್ಲಿ ನಡೆಯುವ ಎಲ್ಲಾ ಉತ್ತಮ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘಟನಾ ಸಾಮರ್ಥ್ಯ ಮತ್ತು ಸಾಮಾಜಿಕ ಬದ್ಧತೆಯಲ್ಲಿ ಹೆಚ್ಚಿಸುವಂತೆ ಪ್ರೊತ್ಸಾಹಿಸಲು ಕರೆ ನೀಡಿದರು. ನಿಧನ ಹೊಂದಿದ ತಾಯಿ ಪೊನ್ನಂಬಿಲಾತ್ ಪಾರಪ್ರವನ್ ಆಯಿಷಾ ಹಜ್ಜುಮ್ಮ ಅವರಿಗೆ ವಿಶೇಷ ಪ್ರಾರ್ಥನೆಗೆ ಮನವಿ ಮಾಡಿದರು . ಸುಳ್ಯ ರೇಂಜ್ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಫೈಝಿ ಐವರ್ನಾಡು ಮತ್ತು ಇಸ್ಮಾಯಿಲ್ ಫೈಝಿ ಅರಂತೋಡು ಶುಭ ಹಾರೈಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಅವರ ವತಿಯಿಂದ ಸುಳ್ಯ ರೇಂಜ್ ವ್ಯಾಪ್ತಿಯ ಐವತ್ತಕ್ಕೂ ಹೆಚ್ಚು ಮುಅಲ್ಲಿಮರಿಗೆ ಮುಅಲ್ಲಿಂಡೇ ಉಡುಗೊರೆ ವಿತರಣೆ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ನಡೆಯಿತು. ಮ್ಯಾನೇಜ್ಮೆಂಟ್ ಪ್ರತಿನಿಧಿಗಳಾದ ಅಬ್ದುಲ್ ಹಮೀದ್ ಹಾಜ ಸುಳ್ಯ, ಅಹ್ಮದ್ ಹಾಜಿ ಸುಪ್ರೀಂ, ಅಹ್ಮದ್ ಹಾಜಿ ಪಾರೆ, ಅಕ್ಬರ್ ಕರಾವಳಿ ಉಪಸ್ಥಿತರಿದ್ದರು. ಸುಳ್ಯ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಶಮೀಂ ಅರ್ಶದಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಯಾಸಿರ್ ಅರಫಾತ್ ಕೌಸರಿ ವಂದಿಸಿದರು. ಸುಳ್ಯ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಮುಅಲ್ಲಿಂಡೇ ಕಾರ್ಯಕ್ರಮ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಅವರಿಂದ 50ಕ್ಕೂ ಹೆಚ್ಚು ಮದ್ರಸಾ ಅಧ್ಯಾಪಕರಿಗೆ ಉಡುಗೊರೆ ವಿತರಣೆ
ಸುಳ್ಯ: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ನಿರ್ದೇಶನದಂತೆ ಸುಳ್ಯ ರೇಂಜ್ ಸಮಿತಿ ವತಿಯಿಂದ ‘ ಮುಅಲ್ಲಿಂ ಡೇ ‘ ಕಾರ್ಯಕ್ರಮವನ್ನು ನಡೆಸಲಾಯಿತು. ಗುರುಂಪು ಸುಪ್ರೀಂ ಹಾಲ್‌ನಲ್ಲಿ ಸುಳ್ಯ ರೇಂಜ್ ಮದ್ರಸಾ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ತಾಜ್ ಮುಹಮ್ಮದ್ ಸಂಪಾಜೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಮುಹಮ್ಮದ್ ಮುಂಡೋಳೆ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ,ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕ್ಕಾಧ್ಯಕ್ಷ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಮಾತನಾಡಿ, ಮುಅಲ್ಲಿಂಮರು ಸಮಾಜದ ಧಾರ್ಮಿಕತೆಯ ಬೆಳವಣಿಗೆಗೆ ಬಹಳ ಉತ್ತಮವಾಗಿ ಕಾರ್ಯಾಚರಿಸುತ್ತಿದ್ದು, ಸಮಾಜ ಅವರನ್ನು ಗೌರವದಿಂದ ಗುರುತಿಸಬೇಕಾಗಿದೆ,ಅದೇ ರೀತಿ, ಮುಅಲ್ಲಿಮರು ಕೂಡಾ ಹೊರ ಜಗತ್ತಿನ ಹಾಗು ಹೋಗುಗಳು ಸಾಧ್ಯತೆಗಳನ್ನು ಸಮರ್ಪಕವಾಗಿ ತಿಳಿದು ಅದನ್ನು ಉಪಯೋಗಿಸುವ ರೀತಿ ನೀತಿಗಳ ಕುರಿತು ಆಲೋಚಿಸಬೇಕು ಎಂದು ಕರೆ ನೀಡಿ ಜಮಾತ್ ಅದೀನದಲ್ಲಿರುವ ವಿದ್ಯಾರ್ಥಿಗಳ ಯುವಕರ ಹದಿಹರೆಯದ ಜನರನ್ನು ಸಮುದಾಯದ ಬೆಳವಣಿಗೆ ಮತ್ತು ಸಮುದಾಯಕ್ಕೆ ಉಪಯೋಗವಾಗುವಂತೆ ಸಮಾಜದಲ್ಲಿ ನಡೆಯುವ ಎಲ್ಲಾ ಉತ್ತಮ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಸಂಘಟನಾ ಸಾಮರ್ಥ್ಯ ಮತ್ತು ಸಾಮಾಜಿಕ ಬದ್ಧತೆಯಲ್ಲಿ ಹೆಚ್ಚಿಸುವಂತೆ ಪ್ರೊತ್ಸಾಹಿಸಲು ಕರೆ ನೀಡಿದರು. ನಿಧನ ಹೊಂದಿದ ತಾಯಿ ಪೊನ್ನಂಬಿಲಾತ್ ಪಾರಪ್ರವನ್ ಆಯಿಷಾ ಹಜ್ಜುಮ್ಮ ಅವರಿಗೆ ವಿಶೇಷ ಪ್ರಾರ್ಥನೆಗೆ ಮನವಿ ಮಾಡಿದರು . ಸುಳ್ಯ ರೇಂಜ್ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಖಾದರ್ ಫೈಝಿ ಐವರ್ನಾಡು ಮತ್ತು ಇಸ್ಮಾಯಿಲ್ ಫೈಝಿ ಅರಂತೋಡು ಶುಭ ಹಾರೈಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಅವರ ವತಿಯಿಂದ ಸುಳ್ಯ ರೇಂಜ್ ವ್ಯಾಪ್ತಿಯ ಐವತ್ತಕ್ಕೂ ಹೆಚ್ಚು ಮುಅಲ್ಲಿಮರಿಗೆ ಮುಅಲ್ಲಿಂಡೇ ಉಡುಗೊರೆ ವಿತರಣೆ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಮಜ್ಲಿಸುನ್ನೂರ್ ಆಧ್ಯಾತ್ಮಿಕ ಸಂಗಮ ನಡೆಯಿತು. ಮ್ಯಾನೇಜ್ಮೆಂಟ್ ಪ್ರತಿನಿಧಿಗಳಾದ ಅಬ್ದುಲ್ ಹಮೀದ್ ಹಾಜ ಸುಳ್ಯ, ಅಹ್ಮದ್ ಹಾಜಿ ಸುಪ್ರೀಂ, ಅಹ್ಮದ್ ಹಾಜಿ ಪಾರೆ, ಅಕ್ಬರ್ ಕರಾವಳಿ ಉಪಸ್ಥಿತರಿದ್ದರು. ಸುಳ್ಯ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಶಮೀಂ ಅರ್ಶದಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಯಾಸಿರ್ ಅರಫಾತ್ ಕೌಸರಿ ವಂದಿಸಿದರು.


