Nammasullia: ಕೊಚ್ಚಿ ಜುಲೈ 31: ಮಲೆಯಾಳಂನ ಖ್ಯಾತ ರ್ಯಾಪರ್ ವೇದನ್ ವಿರುದ್ಧ ವೈದ್ಯೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಮದುವೆಯಾಗುವುದಾಗಿ ಭರವಸೆ ನೀಡಿ ಆಗಸ್ಟ್ 2021 ರಿಂದ ಮಾರ್ಚ್ 2023 ರವರೆಗೆ ಅವರನ್ನು ವಿವಿಧ ಸ್ಥಳಗಳಿಗೆ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ ಎಂದು ವೈದ್ಯೆಯೊಬ್ಬರು ಕೊಚ್ಚಿ ತ್ರಿಕ್ಕಾಕರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವೈದ್ಯೆ ಜುಲೈ 30 ರಂದು ತ್ರಿಕ್ಕಕ್ಕಾರ ಪೊಲೀಸರಿಗೆ ದೂರು ನೀಡಿದ್ದು, ವೇದನ್ ಎಂದೇ ಜನಪ್ರಿಯವಾಗಿರುವ ಹಿರಣ್ ದಾಸ್ ಮುರಳಿ 2021 ರಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ ಮತ್ತು ನಂತರ ಆಗಸ್ಟ್ 2021 ರಿಂದ ಮಾರ್ಚ್ 2023 ರ ನಡುವೆ ಮದುವೆಯ ನೆಪದಲ್ಲಿ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ.ವೇದನ್ ಯುವ ವೈದ್ಯೆಯನ್ನು ಇನ್ಸ್ಟಾಗ್ರಾಮ್ ಮೂಲಕ ಭೇಟಿಯಾದರು. ನಂತರ, ಕೋಝಿಕ್ಕೋಡ್ನಲ್ಲಿರುವ ವೈದ್ಯೆಯ ಮನೆಗೆ ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಮದುವೆಯಾಗುವುದಾಗಿ ಭರವಸೆ ನೀಡಿ ವಿವಿಧ ಸ್ಥಳಗಳಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜುಲೈ 2023 ರಲ್ಲಿ, ವೇಗನ್ ತನ್ನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದು, ತನ್ನ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದನು ಎಂದು ಸಂತ್ರಸ್ಥೆ ವೈದ್ಯೆ ಆರೋಪಿಸಿದ್ದಾರೆ.