Nammasullia: ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕಾಡು ಕೋಣ ದಾಳಿ ನಡೆಸಿದೆ ಘಟನೆ ಅ2 ರಂದು ನಡೆದಿದೆ. ಪರಿಣಾಮ ಜಾಲ್ಸೂರಿನ ರವಿಶಂಕರ್ ಭಟ್ ಅನ್ನುವವರು ಗಂಭೀರ ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ಜಾಲ್ಸೂರು ಗ್ರಾಮದ ನಂಗಾರು ಎಂಬಲ್ಲಿ ಅವಘಡ ಸಂಭವಿಸಿದ್ದು, ಸದ್ಯ ಅವರನ್ನು ಸುಳ್ಯದ ಪ್ರಗತಿ ಆಂಬ್ಯುಲೆನ್ಸ್ ನಲ್ಲಿ ಕೆವಿಜಿ ಆಸ್ಪತ್ರೆಯತ್ತ ಕರೆದುಕೊಂಡು ಹೋಗಲಾಗಿಧ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

