ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ತಾಲ್ಲೂಕು ಪಂಚಾಯತ್ ಸುಳ್ಯ ಗ್ರಾಮ ಪಂಚಾಯತ್ ಅರಂತೋಡು ಮತ್ತು ದುರ್ಗಾ ಮಾತಾ ಸಂಜೀವಿನಿ ಒಕ್ಕೂಟ ಅರಂತೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಅರಂತೋಡು ಗ್ರಾಮ ಪಂಚಾಯತ್ ವಠಾರ ದಲ್ಲಿ ಸಂಜೀವಿನಿ ಮಾಸಿಕ ಸಂತೆ ನಡೆಯಿತು. ಸಭಾ ಕಾರ್ಯಕ್ರಮವನ್ನು ಸುಳ್ಯ ತಾಲ್ಲೂಕು ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ದೀಪ ಬೆಳಗಿಸಿ ಉದ್ಘಾಟಿಸಿದರು.ವೇದಿಕೆಯಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಗ್ರಾಮಪಂಚಾಯತ್ ಪಿಡಿಒ ಜಯಪ್ರಕಾಶ್,ತಾಲೂಕು ಎನ್ ಆರ್ ಎಲ್ ಎಂ ಶ್ವೇತಾ , ನಿವೃತ ಶಿಕ್ಷಕ ತಿರ್ಥರಾಮ ಆಡ್ಕಬಳೆ, ಪ್ರಮೀಳಾ ಉಳುವಾರು,ವೇದಿಕೆಯಲ್ಲಿ ಇದ್ದರು.ಸೇರಿದಂತೆ ,ಗ್ರಾಮ ಪಂಚಾಯತ್ ಸದಸ್ಯರು,ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರು ಇದ್ದರು. ಸಂತೆಯಲ್ಲಿ ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ದಿನಬಳಕೆ ಗೃಹೋಪಯೋಗಿ ಪಾರಂಪರಿಕ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದು. ಸುಳ್ಯ ತಾಲೂಕಿನ ಎನ್.ಆರ್.ಎಲ್.ಎಂ ಸಿಬ್ಬಂದಿ ಗಳು,ಎಂ. ಬಿ. ಕೆ, ಎಲ್ ಸಿ ಆರ್ ಪಿ ,ಸಖಿ ಗಳು ,ತಾಲೂಕು ಪಂಚಾಯತ್ Nrlm ಸಿಬ್ಬಂದಿಗಳು, ತಾಲೂಕು ಗ್ರಾಮ ಒಕ್ಕೂಟ ದ ಸಿಬ್ಬಂದಿಗಳು, ಸಂಜೀವಿನಿ ಸದಸ್ಯರು, ಹಾಜರಿದ್ದರು.

