ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ರಿ) ಸಾಹಿತ್ಯ ಹಬ್ಬವಾದ ಸಾಹಿತ್ಯೋತ್ಸವ ರಾಜ್ಯಾದಾದ್ಯಂತ ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ನಡೆಯಲಿದೆ. ದ.ಕ ಈಸ್ಟ್ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಸೆಪ್ಟಂಬರ್ 20 ಮತ್ತು 21 ರಂದು ಸುಳ್ಯ ಡಿವಿಷನ್ ವ್ಯಾಪ್ತಿಯ ಬೆಳ್ಳಾರೆಯ ದಾರುಲ್ ಹುದಾ ತಂಬಿನಮಕ್ಕಿ ಸಂಸ್ಥೆಯಲ್ಲಿ ನಡೆಯಲಿದೆ. ಜಿಲ್ಲೆಯ ಆರು ಡಿವಿಷನ್ ಗಳ 1000ಕ್ಕೂ ಮಿಕ್ಕ ಸ್ಪರ್ದಾರ್ಥಿಗಳು ಭಾಗವಹಿಸಲಿದ್ದಾರೆ.
ಪ್ರಸ್ತುತ ಸಾಹಿತ್ಯೋತ್ಸವದ ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರಚನಾ ಸಭೆಯು ಜುಲೈ 27ರಂದು ಜಿಲ್ಲಾಧ್ಯಕ್ಷ ಇಂಜಿನಿಯರ್ ಶಫೀಖ್ ಸಅದಿ ಈಶ್ವರಮಂಗಲ ರವರ ಅಧ್ಯಕ್ಷತೆಯಲ್ಲಿ ತಂಬಿನಮಕ್ಕಿ ದಾರುಲ್ ಹುದಾ ಸಂಸ್ಥೆಯಲ್ಲಿ ಜರಗಿತು. ಸಂಸ್ಥೆಯ ಜನರಲ್ ಮ್ಯಾನೇಜರ್ ಖಲೀಲ್ ಹಿಮಮಿ ಸಖಾಫಿ ಉದ್ಘಾಟಿಸಿದರು. ಎಸ್.ವೈ.ಎಸ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಬಶೀರ್ ಸಅದಿ ಹಾಗೂ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಮುಹಮ್ಮದ್ ಮಿಸ್ಬಾಹಿ ಯವರು ಶುಭಹಾರೈಸಿದರು. ಸಭೆಯಲ್ಲಿ ಜಿಲ್ಲಾ ಸಾಹಿತ್ಯೋತ್ಸವದ ಯಶಸ್ಸಿಗೆ ಬೇಕಾಗಿ ಸ್ವಾಗತ ಸಮಿತಿ ರಚಿಸಲಾಯಿತು.
ಸಾಹಿತ್ಯೋತ್ಸವ ಸ್ವಾಗತ ಸಮಿತಿ : ಸಲಹಾ ಸಮಿತಿ ಸದಸ್ಯರಾಗಿ ಖಲೀಲ್ ಹಿಮಮಿ ಸಖಾಫಿ, ಎಫ್ ಹೆಚ್ ಮುಹಮ್ಮದ್ ಮಿಸ್ಬಾಹಿ,ಅಬೂ ಶಝಾ,ಬಿ.ಎಂ.ಎ ಅಬೂಬಕರ್ ಹಾಜಿ, ಅಬ್ದುಲ್ ಖಾದರ್ ಹಾಜಿ ಕಲ್ಲಪ್ಪಳ್ಳಿ, ಅಬ್ದುಲ್ ಹಮೀದ್ ಬೀಜಕೊಚ್ಚಿ, ಮುಹಮ್ಮದ್ ನೆಲ್ಯಮಜಲ್, ಮಹ್ಮೂದ್ ಹಾಜಿ ಬೆಳ್ಳಾರೆ ಚೇರ್ಮನ್ ಅಬ್ದುಲ್ ಲತೀಫ್ ಹರ್ಲಡ್ಕ , ಜನರಲ್ ಕನ್ವೀನರ್ ಅಲಿ ಸಅದಿ ಕುಕ್ಕಿಲ ಫಿನಾನ್ಸ್ ಕಂಟ್ರೋಲರ್ ಶಂಸುದ್ದೀನ್ ಪಳ್ಳಿಮಜಲು, ವೈಸ್ ಚೇರ್‌ಮಾನ್ ಗಳಾಗಿ ಹಸನ್ ಸಖಾಫಿ ಬೆಳ್ಳಾರೆ, ಯೂಸುಫ್ ಸಾಜ,ವೈ.ಕೆ ಸುಲೈಮಾನ್ ಹಾಜಿ ಇಂದ್ರಾಜೆ, ಮುಹಮ್ಮದ್ ಕರಾವಳಿ, ಅಬ್ದುಲ್ ಹಮೀದ್ ಸುಣ್ಣಮೂಲೆ,
ಕನ್ವೀನರ್ ಗಳಾಗಿ ಹನೀಫ್ ಹಾಜಿ ಇಂದ್ರಾಜೆ,ಶರೀಫ್ ಸುದ್ದಿ, ಸಿದ್ದೀಖ್ ಗೂನಡ್ಕ, ರಿಯಾನ್ ಸಅದಿ ಬೆಳ್ಳಾರೆ,ಡಾ.ಫಾರೂಕ್ ಕರ್ವೇಲ್, ಫುಡ್ ಉಸ್ತುವಾರಿಗಳಾಗಿ ಹಸನ್ ಹಾಜಿ ಹಾಗೂ ಸಿದ್ದೀಖ್ ಕಟ್ಟೆಕ್ಕಾರ್ ಸ್ವಯಂ ಸೇವಕರ ಉಸ್ತುವಾರಿಗಳಾಗಿ ಮುನೀರ್ ಬೂಡು ಹಾಗೂ ಶಾಕಿರ್ ಮಾಸ್ತಿಕ್ಕಟ್ಟೆ , ಕಾನೂನು ಸಲಹೆಗಾರರಾಗಿ ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್, ಅಡ್ವಕೇಟ್ ಮೂಸ ಪೈಂಬಚ್ಚಾಲ್ ಹಾಗೂ ಅಯ್ಯೂಬ್ ತಂಬಿನಮಕ್ಕಿ, ಮೀಡಿಯಾ ನಿರ್ವಹಣೆ ಗಾಗಿ ಅಬ್ದುಲ್ಲ ತಂಬಿನಮಕ್ಕಿ,ಕಬೀರ್ ಹಿಮಮಿ ಹಾಗೂ ಸದಸ್ಯರುಗಳಾಗಿ ಹುಸೈನ್ ಸಖಾಫಿ, ಮುಹಿಯದ್ದೀನ್ ತಂಬಿನಮಕ್ಕಿ, ಕೆ.ಪಿ ಹಮೀದ್, ಇಕ್ಬಾಲ್ ಬಪ್ಪಳಿಗೆ, ಸ್ವಾಲಿಹ್ ಮುರ, ಹಮೀದ್ ಅಲ್ಫಾ, ಅಶ್ರಫ್ ನೇಲ್ಯಮಜಲ್, ಫೈಝಲ್ ಝುಹುರಿ, ಹಸೈನಾರ್ ಗುತ್ತಿಗಾರು, ಕಬೀರ್ ಜಟ್ಟಿಪ್ಪಳ್ಳ, ಸಿ.ಎಚ್ ಅಬ್ದುಲ್ ಖಾದರ್, ಹಕೀಂ ಕಲಂಜಿಬೈಲು, ಮುಸ್ತಫಾ ಯು.ಪಿ, ರವರನ್ನು ಆರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಿ.ಸಿ ಕಾರ್ಯದರ್ಶಿ ಸಬಾಹ್ ಹಿಮಮಿ ಬೀಜಕೊಚ್ಚಿ ಸ್ವಾಗತಿಸಿ ಅಲಿ ಸಅದಿ ವಂದಿಸಿದರು.

