ಕಡಬ : ಆಗಸ್ಟ್ 17ರಂದು ನಡೆಯಲಿರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ SDPI ಪಕ್ಷದಿಂದ
ಒಂದನೇ ವಾರ್ಡ್ ಕಲಾರ ದಿಂದ ಸಮೀರಾ ಹಾರಿಸ್, 3ನೇ ವಾರ್ಡ್ ಪಣ್ಯದಿಂದ ಹಾರಿಸ್ ಕಲಾರ, 6ನೇ ವಾರ್ಡ್ ಕಡಬ ದಿಂದ ಸ್ವಾಲಿಯತ್ ಜಸೀರ ರವರು ಚುನಾವಧಿಕಾರಿ ಗಳಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಅಶ್ರಫ್ ತಲಪಾಡಿ, ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷರು ಹಾಗೂ ಕಡಬ ಪಟ್ಟಣ ಪಂಚಾಯತ್ ಚುನಾವಣಾ ಉಸ್ತುವಾರಿ ವಿಕ್ಟರ್ ಮಾರ್ಟಿಸ್, ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮಿರಾಝ್ ಸುಳ್ಯ ಉಪಸ್ಥಿತರಿದ್ದರು
