ದಿನಾಂಕ 01/08/2025 ರಂದು ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಗೂನಡ್ಕ ಇಲ್ಲಿ ‘ POCSO’ ಕಾಯಿದೆ ಕುರಿತಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿಷಯದ ಕುರಿತು ನಮ್ಮ ಶಾಲೆಯ ಸಹ ಶಿಕ್ಷಕಿಯಾದ ಆಯಿಷತ್ ನೌಫಿಯಾ ಇವರು ಮಾತನಾಡುತ್ತ, POCSO ಕಾಯಿದೆಯು ಹದಿನೆಂಟು ವರ್ಷದ ಒಳಗಿನ ಮಕ್ಕಳ ರಕ್ಷಣೆಗೆ ಇರುವಂತಹ ಕಾಯಿದೆಯಾಗಿದ್ದು, ಈ ವಯೋಮಿತಿಯ ಯಾವುದೇ ಮಕ್ಕಳು ಲೈಂಗಿಕ ಶೋಷಣೆ ಅಥವಾ ದೌರ್ಜನ್ಯಕ್ಕೆ ಒಳಗಾಗದಂತೆ ಸಮಾಜದ ಯಾವುದೇ ಕ್ಷೇತ್ರಗಳಲ್ಲಿ ನಿರ್ಭಿತಿಯಿಂದ ಆರೋಗ್ಯಕರವಾದ ವಾತಾವರಣದಲ್ಲಿ ಕಲಿಯಲು ಕಾನೂನಿನ ಅಡಿಯಲ್ಲಿ ಇರುವಂತಹ ಕಾಯಿದೆಯಾಗಿದೆ ಎಂದು ಹೇಳಿದರು. ಮುಂದುವರೆದು, ಯಾವುದೇ ಸಂಶಯಾಸ್ಪದ ವ್ಯಕ್ತಿಗಳಿಂದ ತೊಂದರೆಗಳು ಉಂಟಾದಲ್ಲಿ ತಕ್ಷಣ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ POCSO ಕಾಯಿದೆ ಅಡಿಯಲ್ಲಿ ಅಪರಾಧಿಗೆ ಇರುವಂತಹ ಶಿಕ್ಷೆಗಳು ಹೀಗೆ ಅನೇಕ ವಿಷಯಗಳ
ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ.ಡಿ, ಕಾರ್ಯಕ್ರಮದ ನಿರೂಪಕರಾಗಿ ಸಲ್ಮತ್ ನುಸೈಭಾ, ಸ್ವಾಗತ ಭಾಷಣವನ್ನು ಅರ್ಫಾನ ಹಾಗೂ ವಂದನಾರ್ಪಣೆಯನ್ನು ಆಯಿಷತ್ ಸುನೈನಾ ನೆರವೇರಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರಾದ ಸಾಧಿಕ ಎ ಕೆ, ಆಯಿಷತ್ ಸಬೀರಾ,ಸೈನಾಜ್, ಕೈರುನ್ನೀಸ ಮತ್ತು ಮಹಮ್ಮದ್ ವಾರೀಸ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳೆಲ್ಲರೂ ಈ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
