ಪೈಚಾರ್: ಸಾಮಾಜಿಕ, ಕ್ರೀಡಾ, ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಳ್ಯ ತಾಲೂಕಿನ ಪ್ರತಿಷ್ಠಿತ ಕ್ಲಬ್‌ಗಳಲ್ಲಿ ಒಂದಾಗಿರುವ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ಆ.೧೫ರಂದು ಪೈಚಾರ್ ನಲ್ಲಿ ನಡೆಯಲಿದೆ. ಬೆಳಗ್ಗೆ 8:30 ಉದ್ಘಾಟನಾ ಸಮಾರಂಭ ಹಾಗೂ ಧ್ವಜಾರೋಹಣ ಕಾರ್ಯಕ್ರಮ, ಮಧ್ಯಾಹ್ನ 2:00 ಗಂಟೆಗೆ ಸಭಾ ಕಾರ್ಯಕ್ರಮ ಹಾಗೂ ಸುಳ್ಯದಲ್ಲಿ ವೈದ್ಯಕೀಯ ರಂಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿರುವ ಈರ್ವರಿಗೆ ಅದ್ದೂರಿ ಸನ್ಮಾನ ಸಮಾರಂಭ ನಡೆಯಲಿದೆ.
ವೈದ್ಯಕೀಯ ರಂಗದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುಳ್ಯ ತಾಲೂಕಿನ ಜನಪ್ರಿಯ ವೈದ್ಯ ಡಾ. ಶಂಕರ್ ಭಟ್ (ಹಿರಿಯ ವೈದ್ಯರು) ಹಾಗೂ ಹಲವಾರು ಮಕ್ಕಳಿಗೆ ಶಿಕ್ಷಣ ಧಾರೆಯೆರೆದ ಸರಕಾರಿ ಪದವಿ ಪೂರ್ವ ಕಾಲೇಜಿನ ಸುಂದರ್ ಮಾಸ್ಟರ್ (ನಿವೃತ್ತ ಶಿಕ್ಷಕರು, ಪಿಲಿಕ್ಕೋಡಿ) ಇವರಿಗೆ ಅದ್ದೂರಿ ಸನ್ಮಾನ ಸಮಾರಂಭ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.