ಸುಳ್ಯ: ಇಲ್ಲಿನ ಪೈಚಾರು- ಸೋಣಂಗೇರಿ ಮಧ್ಯೆ ಇರುವ ಆರ್ತಾಜೆ ಎಂಬಲ್ಲಿ ಅಡ್ಡ ರಸ್ತೆಯಲ್ಲಿ ಸರಿ-ಸುಮಾರು 60ಕ್ಕೂ ಹೆಚ್ಚು ಮನೆಯಲ್ಲಿ ಸುಮಾರು ಕಳೆದ 3 ತಿಂಗಳಿನಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದೆ, ಹಾಗೂ ಪ್ರತಿದಿನ ಲೋ ವೋಲ್ಟೇಜ್ ಸಮಸ್ಯೆಯಿಂದ ಕತ್ತಲಲ್ಲಿ ಕಳೆಯುವಂತಾಗಿದೆ. ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಿದರೆ, ತಾತ್ಕಾಲಿಕವಾಗಿ ಬಂದು ಸರಿಪಡಿಸುತ್ತಿದ್ದರು, ಅದೇ ಸಮಸ್ಯೆ ಮತ್ತೆ ಮತ್ತೆ ಮರುಕಳಿಸುತ್ತಿದ್ದು, ಆದುದರಿಂದ ಸಂಭಂದಿಸಿದ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ 3Pc ಲೈನ್ ಅಳವಡಿಕೆ ಮಾಡಿ ಸಮರ್ಪಕ ವಿದ್ಯುತ್ ಪೂರೈಕೆ ಒದಗಿಸಿಕೊಡಬೇಕಾಗಿ ಮನವಿಯನ್ನು ನೀಡಿಲಾಯಿತು.
ಈ ಸಂದರ್ಭದಲ್ಲಿ ಮುಜೀಬ್ ಆರ್ತಾಜೆ
ಸದಸ್ಯರು ಗ್ರಾಮ ಪಂಚಾಯತ್ ಜಾಲ್ಸೂರು, ತಿರುಮಲೇಶ್ವರ, ನಾಸಿರ್ ಕೆ.ಪಿ, ಪ್ರವಿಣ ನಡುಬೆಟ್ಟು, ಉಮ್ಮರ್, ಬಶೀರ್ ಕೆ.ಪಿ, ಮಜೀದ್ ಆರ್ತಾಜೆ ಉಪಸ್ಥಿತರಿದ್ದರು.