ಸುಳ್ಯ ಆಗಸ್ಟ್ 29: ಅರಂಬೂರಿನ ಹಿರಿಯ ವ್ಯಕ್ತಿ, ವರ್ತಕರೂ, ಬದರ್ ಜುಮ್ಮಾ ಮಸೀದಿ ಅರಂಬೂರು ಇದರ ಸ್ಥಾಪಕ ಸದಸ್ಯರು, ಸದ್ರಿ ಮಸೀದಿಯ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಅರಂಬೂರು ರವರು ಇಂದು ನಮ್ಮನ್ನು ಅಗಲಿದ ಸುದ್ದಿ ತಿಳಿದು ಅಘಾತವಾಯಿತು, ಇವರು ಮಕ್ಕಳಾದ, ಮೊಹಿದ್ದೀನ್ ಅರಂಬೂರು,ಬಶೀರ್ ಅರಂಬೂರು, ಖಲಂದರ್ ಅರಂಬೂರು, ಅಬ್ದುಲ್ ಕುಂಞ ಅರಂಬೂರು, ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮೃತರ ಕುಟುಂಬಕ್ಕೆ ಬಂಧು-ಮಿತ್ರರಿಗೆ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ನೀಡಲಿ ಎಂದು ಪ್ರಾರ್ಥಿಸುತ್ತಾ,
ಇವರ ನಿಧನಕ್ಕೆ SDPI ಸುಳ್ಯ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಸಿ.ಎ. ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

