ಸಮರ್ಪಣೆ, ತಾಳ್ಮೆ ಮತ್ತು ತ್ಯಾಗ ಸಾಧನೆಯ ರಹದಾರಿ : ಕೆ. ಎಂ. ಮುಸ್ತಫ
ಪುತ್ತೂರು ತಾಲೂಕಿನ ಬೈತಡ್ಕ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷ ಹಾಜಿ ಬಿ. ಪಿ. ಇಸ್ಮಾಯಿಲ್ ರವರ ಪುತ್ರಿ ಫಾತಿಮತ್ ಸಜ್ ಲಾ ತನ್ನ ಕಾಲೇಜು ವಿದ್ಯಾಭ್ಯಾಸ ದ ಜೊತೆಗೆ ಪವಿತ್ರ ಕುರ್’ಆನ್ (30 ಜುಝ್ಹ್ ) ಗಳನ್ನು ಕೈ ಬರಹದ ಮೂಲಕ ಬರೆದು ಅಪೂರ್ವ ಸಾಧನೆ ಮಾಡಿದ್ದಾರೆ. ಇವರ ಸಾಧನೆ ಯನ್ನು ಅಭಿನಂದಿಸಿ ಸುಳ್ಯದ ವಿವಿಧ ಸಂಘ ಸಂಸ್ಥೆ ಗಳ ಪ್ರತಿನಿಧಿಗಳು ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ನೆರವೇರಿಸಿ ಮಾತನಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ಮಾತನಾಡಿ ಪೆನ್ನು ಬಳಸಿ ಪವಿತ್ರ ಕುರ್ ಆನ್ ನ್ನು ಕೈ ಬರಹ ಮೂಲಕ ಬರೆದವರು ಸಿಗಬಹುದು, ಆದರೆ ಹಿಂದಿನ ಕಾಲದಂತೆ ಲೇಖನಿ (ಕಲಮ್) ಯನ್ನು ಮಷಿ ಗೆ ಆದ್ದಿ ಪ್ರತಿಯೊಂದು ಅಕ್ಷರ ಗಳನ್ನು ಸಾಂಪ್ರದಾಯಿಕ ಮತ್ತು ಪಾವಿತ್ರ್ಯತೆ ಯ ಸೂಕ್ಷ್ಮ ದೃಷ್ಟಿ ಕೋನದಲ್ಲಿ ಬರೆದ ಫಾತಿಮತ್ ಸಜ್ ಲಾ ಸಾಧನೆ ಅತ್ಯಪೂರ್ವ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯರು ಗಳಾದ ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಉಪಾಧ್ಯಕ್ಷ ಕೆ. ಬಿ. ಇಬ್ರಾಹಿಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಜ್ಲಾ ರವರ ತಂದೆ ಹಾಜಿ ಬಿ. ಪಿ. ಇಸ್ಮಾಯಿಲ್ ರವರು ಮಾಹಿತಿ ನೀಡಿ 2416 ಗಂಟೆ ಗಳಲ್ಲಿ ಲೆಕ್ಕ ಹಾಕಿದರೆ ಅಂದರೆ 306 ನಿರಂತರ ದಿನಗಳ ಬಳಕೆಯಾಗಿರುತ್ತದೆ. 14 ಇಂಚು ಅಗಲ, 12 ಇಂಚು ಉದ್ದ 5.5 ಇಂಚು ದಪ್ಪ ದ ಪುಸ್ತಕ ದಲ್ಲಿ ಸುಂದರವಾದ ವಿನ್ಯಾಸ ದ ಕಲಾತ್ಮಕ ಬೈಂಡಿಂಗ್ ನೊಂದಿಗೆ ಈ ಸಾಧನೆ ಯನ್ನು ಸುರಕ್ಷಿತ ವಾಗಿ ಇಡಲಾಗಿದೆ ಎಂದು ವಿವರಿಸಿದರು.

