ಪ್ರವಾದಿಯರ ಶಾಂತಿಯ ಸಂದೇಶ ಇಂದಿಗೂ, ಎಂದೆಂದಿಗೂ ಪ್ರಸ್ತುತ: ಅಶ್ರಫ್ ಖಾಮಿಲ್ ಸಖಾಫಿ

ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸ್ಜಿದ್ ತರ್ಭಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫ ( ಸ. ಅ.) ರವರ 1500 ನೇ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ಜಮಾಅತ್ ಅಧ್ಯಕ್ಷ ಹಾಜಿ ಕೆ ಎಂ ಎಸ್ ಮಹಮ್ಮದ್ ಧ್ವಜಾರೋಹಣ ದೊಂದಿಗೆ ಚಾಲನೆಗೊಂಡ ಕಾರ್ಯಕ್ರಮ, ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಸ್ವಲಾತ್ ಮೆರವಣಿಗೆ, ವಿದ್ಯಾರ್ಥಿಗಳ ಆಕರ್ಷಕ ಕಲಾ ಪ್ರದರ್ಶನ ಮೂಲಕ ಸಾಗಿತು, ಮದ್ರಸ ವಿದ್ಯಾರ್ಥಿಗಳ 2 ದಿನದ ವಿದ್ಯಾರ್ಥಿ ಫೆಸ್ಟ್ ಕಲಾ ಸಾಹಿತ್ಯದ ಇಸ್ಲಾಮಿಕ್ ಪ್ರತಿಭೆಗಳು ಅನಾವರಣಗೊಂಡಿತು.
ಮಸೀದಿಯಲ್ಲಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ, ದುಃವ ಮಜ್ಲಿಸ್ ವಿಶ್ವ ಶಾಂತಿ ಗಾಗಿ ಪ್ರಾರ್ಥನೆ ನೆರವೇರಿತು. ಈದ್ ಸಂದೇಶ ನೀಡಿದ ಖತೀಬರಾದ ಅಶ್ರಫ್ ಖಾ ಮಿಲ್ ಸಖಾಫಿ ಮಾತನಾಡಿ ಪ್ರವಾದಿಯವರ ಶಾಂತಿಯ ಸಂದೇಶ ಇಂದಿಗೂ ಪ್ರಸ್ತುತ, ಮಾನವ ಸಂಬಂಧವನ್ನು ಜಾತಿ ಮತ ಭೇದವಿಲ್ಲದೆ ಎತ್ತಿ ಹಿಡಿದ ಪ್ರವಾದಿ ಯವರ ಜೀವನ ಶೈಲಿ ಅನುಕರಣೀಯ ಎಂದರು. ಸುಳ್ಯ ತಾಲೂಕು ಜಂಇಯ್ಯತುಲ್ ಮುಅಲ್ಲಿ ಮೀನ್ ಅಧ್ಯಕ್ಷ ಕುಂಞಕೋಯ ತಙಳ್ ಸಅದಿ ಮೆರವಣಿಗೆ ದುಃವಾ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫಾ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಾಮೊಟ್ಟೆ, ನಗರ ಪಂಚಾಯತ್ ಸದಸ್ಯರು ಗಳಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಜಮಾ ಅತ್ ಕಮಿಟಿ ಉಪಾಧ್ಯಕ್ಷ ಹಮೀದ್ ಬೀ ಜಕೊಚ್ಚಿ, ಕೋಶಾಧಿಕಾರಿ ಎಸ್. ಎಂ. ಹಮೀದ್, ಕಾರ್ಯದರ್ಶಿ ಇಸ್ಮಾಯಿಲ್ ಹಾಜಿ, ನಿರ್ದೇಶಕರುಗಳಾದ ಮುಹಿಯದ್ದೀನ್ ಫ್ಯಾನ್ಸಿ, ಯಾಕೂಬ್ ಎಸ್ ಟಿ, ಸಿದ್ದೀಕ್ ಕೊಡಿಯಮ್ಮೆ, ಅನ್ಸಾರ್ ಅಧ್ಯಕ್ಷ ಹಾಜಿ ಎಸ್. ಅಬ್ದುಲ್ಲ ಕಟ್ಟೆಕ್ಕಾರ್ಸ್, ಅನ್ಸಾರಿಯ ಅಧ್ಯಕ್ಷ ಅಬ್ದುಲ್ ಮಜೀದ್ ಜನತಾ, ಸದರ್ ಉಸ್ತಾದ್ ಸಿರಾಜುದ್ದೀನ್ ಸಖಾ ಫಿ,ಮದರಸ ಉಸ್ತುವಾರಿ ಅಬ್ದುಲ್ ಗಫಾರ್ ಮೊದಲಾದವರು ಉಪಸ್ಥಿತರಿದ್ದರು.

