ನೆಹರೂ ಮೆಮೋರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಜೀವಶಾಸ್ತ್ರ ಪದವಿ ವಿಭಾಗಗಳ ವತಿಯಿಂದ ಓಣಂ ಮುನ್ನಾದಿನ ‘ಫ್ಲೋರಾ ಫಿಯೆಸ್ಟಾ- ಹೂವಿನ ಉತ್ಸವ’ ಶೀರ್ಷಿಕೆಯಡಿ ಕಾಡು ಹೂವು, ಸಸ್ಯಜನ್ಯ ವಸ್ತುಗಳು, ಎಲೆಗಳನ್ನು ಬಳಸಿಕೊಂಡು ಕಲಾತ್ಮಕ ಹೂವಿನ ರಂಗೋಲಿ ಪೂಕಳಂ ರಚಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕರಾದ ರತ್ನಾವತಿ ಡಿ ಉಪಸ್ಥಿತರಿದ್ದು ಸ್ಪರ್ಧಿಗಳಿಗೆ ಶುಭಹಾರೈಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದವರು ಪೂರ್ಣ ಪ್ರಮಾಣದಲ್ಲಿ ಮನೆ ಸುತ್ತಮುತ್ತಲ ಪರಿಸರದಿಂದ ಸಂಗ್ರಹಿಸಿ ತಂದ ಕಾಡು ಹೂವುಗಳು ಇನ್ನಿತರ ಸಸ್ಯಜನ್ಯ ವಸ್ತುಗಳನ್ನೇ ಬಳಸುವುದು ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಇವುಗಳಿಂದ ಕಲಾತ್ಮಕವಾಗಿ ಹೂವಿನ ರಂಗೋಲಿ- ಪೂಕಳಂ ರಚಿಸಿದ್ದು ಸುಂದರವಾಗಿ ಮೂಡಿಬಂದು, ನೋಡುಗರ ಗಮನ ಸೆಳೆಯಿತು.
ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಪ್ರಯೋಗಾಲಯದಲ್ಲಿ ಹಮ್ಮಿಕೊಂಡ ಈ ಸ್ಪರ್ಧಾ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಿವ್ಯಾ ಟಿ. ಎಸ್, ಸಮಾಜ ಕಾರ್ಯ ವಿಭಾಗ ಮುಖ್ಯಸ್ಥೆ ಶೋಭಾ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ದೀಕ್ಷಾ ಸಹಕರಿಸಿದರು.
ನೇಚರ್ ಕ್ಲಬ್ ಕಾರ್ಯದರ್ಶಿ ಅಕ್ಷತಾ, ಖಜಾಂಜಿ ಚೈತ್ರ, ಸ್ಪರ್ಧಾ ಸಮಿತಿ ಸಂಚಾಲಕಿ ಕೀರ್ತಿಕಾ ಎಂ.ಕೆ, ವಿಜಯಲಕ್ಷ್ಮಿ ಇನ್ನಿತರ ಪದಾಧಿಕಾರಿಗಳು ಸ್ಪರ್ಧೆಯನ್ನು ಆಯೋಜಿಸಿದ್ದರು. ಜೀವವಿಜ್ಞಾನ ವಿಭಾಗಗಳ ಉಪನ್ಯಾಸಕರಾದ ಕುಲದೀಪ್ ಪೆಲ್ತಡ್ಕ, ಕೃತಿಕಾ ಕೆ ಜೆ, ಪಲ್ಲವಿ ಕೆ ಎಸ್, ಜಿತೇಶ್, ಅಭಿಜ್ಞಾ ಮತ್ತು ಭಾವನಾ ಮಾರ್ಗದರ್ಶನ ನೀಡಿದರು.
ನೇಚರ್ ಕ್ಲಬ್ ನ ಸದಸ್ಯರಾದ ಜೀವವಿಜ್ಞಾನ ಪದವಿ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.