ಸುಳ್ಯ: ನೆಹರೂ ಮೆಮೋರಿಯಲ್ ಪದವಿ ಹಾಗೂ ಪದವಿ ಪೂರ್ವ ಕಾಲೇಜು ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ (IQAC) ಸಂಯುಕ್ತ ಆಶ್ರಯದಲ್ಲಿ “Student and Faculty Enrichment Programme” ಎಂಬ ಶೀರ್ಷಿಕೆಯಡಿ ಒಂದು ದಿನದ ಕೌಶಲ್ಯಾಭಿವೃದ್ಧಿ ಉಪನ್ಯಾಸ ಕಾರ್ಯಾಗಾರ ಸೆಪ್ಟೆಂಬರ್ 6ರಂದು ಶನಿವಾರ, ಕೆ.ವಿ.ಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯದ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು “ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳು ದಿನದಿಂದ ದಿನಕ್ಕೆ ವೇಗವಾಗಿ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಬೋಧಕ ವೃಂದವು ಹೊಸ ತಂತ್ರಜ್ಞಾನ, ಬೋಧನಾ ವಿಧಾನಗಳು ಹಾಗೂ ಸಂಶೋಧನಾ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಇಂತಹ ಕಾರ್ಯಾಗಾರಗಳು ಶಿಕ್ಷಕರಲ್ಲಿ ಹೊಸ ಜ್ಞಾನ, ನವೀನತೆ ಮತ್ತು ಪ್ರೇರಣೆಯನ್ನು ಹುಟ್ಟುಹಾಕುತ್ತವೆ. ಶಿಕ್ಷಕರು ತಮ್ಮನ್ನು ತಾವು ನಿರಂತರವಾಗಿ ಅಭಿವೃದ್ಧಿಪಡಿಸಿಕೊಂಡರೆ ಮಾತ್ರ ಶಿಕ್ಷಣ ಕ್ಷೇತ್ರದ ಗುಣಮಟ್ಟ ಹೆಚ್ಚುವುದು. ಆತ್ಮವಿಶ್ವಾಸ, ಸೃಜನಶೀಲತೆ ಮತ್ತು ಬೋಧನಾ ಕೌಶಲ್ಯವನ್ನು ವೃದ್ಧಿಸಲು ಈ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸುತ್ತವೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಂತರಾಷ್ಟ್ರೀಯ ತರಬೇತುದಾರ ಆರ್.ಎ. ಚೇತನ್ ರಾಮ್ (ಮೈಸೂರು) ಹಾಗೂ ಖ್ಯಾತ ಪ್ರೇರಣಾದಾಯಕ ಮಾತುಗಾರರು ಮತ್ತು ತರಬೇತುದಾರ ರಾಜೇಂದ್ರ ಭಟ್ (ಕಾರ್ಕಳ) ಉಪಸ್ಥಿತರಿದ್ದರು.
ವೇದಿಕೆಯಲ್ಲಿ ನೆಹರೂ ಮೆಮೋರಿಯಲ್ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ್ ಪೇರಾಲು, ಪದವಿ ಕಾಲೇಜಿನ ಪ್ರಾಂಶುಪಾಲರು ಡಾ. ರುದ್ರಕುಮಾರ್ ಎಮ್.ಎಮ್., ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮಿಥಾಲಿ ಪಿ. ರೈ, ಎನ್ ಎಂ ಸಿ ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ ಹಾಗೂ IQAC ಸಂಚಾಲಕರಾದ ಡಾ. ಮಮತಾ ಕೆ, ಎನ್ ಎಂ ಪಿ ಯು ಸಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬೇಬಿ ವಿದ್ಯಾ ಪಿ.ಬಿ.ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಕೃತಿಕಾ ಬೊಳುಗಲ್ಲು ಪ್ರಾರ್ಥನೆ ಸಲ್ಲಿಸಿದರು. ಡಾ. ರುದ್ರಕುಮಾರ್ ಎಮ್.ಎಮ್. ಸ್ವಾಗತಿಸಿ, ಮಿಥಾಲಿ ಪಿ. ರೈ ವಂದಿಸಿದರು. ಬೇಬಿ ವಿದ್ಯಾ ಪಿ.ಬಿ. ಕಾರ್ಯಕ್ರಮ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿಗಳನ್ನು ಪಿಯು ಉಪನ್ಯಾಸಕರಾದ ವಿನಯ್ ನಿಡ್ಯಮಲೆ, ಅಶ್ವಿತಾ, ರಕ್ಷಿತ್ ಪರಿಚಯಿಸಿದರು.ಪ್ರತ್ಯೇಕ ತರಬೇತಿಯ ಬಳಿಕ ಪದವಿ ವಿಭಾಗದ ವಿದ್ಯಾರ್ಥಿ ಕ್ಷೇಮಾಧಿಕಾರಿ ರತ್ನಾವತಿ ಡಿ. ಹಾಗೂ ಐ ಕ್ಯೂ ಎ ಸಿ ಸಂಚಾಲಕಿ ಡಾ ಮಮತ ಕೆ ಧನ್ಯವಾದ ಸಲ್ಲಿಸಿದರು. ಕೆ.ವಿ.ಜಿ. ಸಹ ವಿದ್ಯಾಸಂಸ್ಥೆಗಳ ಹಾಗೂ ಸುಳ್ಯ ಸುತ್ತಮುತ್ತಲಿನ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕರು, ಉದ್ಯೋಗಿಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದರು.

ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಆರ್.ಎ. ಚೇತನ್ ರಾಮ್ ಮತ್ತು ರಾಜೇಂದ್ರ ಭಟ್ ಅವರು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ತರಗತಿ ಕೋಣೆಯ ಸಂವಹನ ಕೌಶಲ್ಯ, ಅಧ್ಯಯನ ತಂತ್ರಗಳು, ವ್ಯಕ್ತಿತ್ವಾಭಿವೃದ್ಧಿ ಹಾಗೂ ಪ್ರೇರಣಾ ಕಲಿಕೆ ಕುರಿತು ಪ್ರತ್ಯೇಕ ಉಪನ್ಯಾಸ-ಕಾರ್ಯಾಗಾರ ನಡೆಸಿದರು.

Leave a Reply

Your email address will not be published. Required fields are marked *