nammasullia: ನಭೋ ಮಂಡಲದಲ್ಲಿ ಈ ವರ್ಷದ ಕೊನೆಯ ಚಂದ್ರಗ್ರಹಣ ಹಾಗೂ 2ನೇ ರಕ್ತಚಂದ್ರ (Blood Moon) ಗೋಚರವಾಗಿದೆ. ರಾತ್ರಿ ಅಪರೂಪದ ದೃಶ್ಯ ಕಾಣಿಸಿಕೊಂಡಿದೆ. ಜನರು ಪೂರ್ಣ ಚಂದ್ರ ಗ್ರಹಣ ನೋಡಿ ಖುಷಿ ಪಟ್ಟಿದ್ದಾರೆ.
ರಾತ್ರಿ 9:57ರಿಂದ ಗ್ರಹಣ ಪ್ರಕ್ರಿಯೆ ಶುರುವಾಗಿದ್ದು, 11 ಗಂಟೆ 45 ನಿಮಿಷಗಳ ಹೊತ್ತಿಗೆ ವಿಶ್ವದ ವಿವಿಧ ದೇಶಗಳು ಸೇರಿದಂತೆ ಭಾರತದಲ್ಲೂ ವಿವಿಧ ರಾಜ್ಯಗಳಲ್ಲಿ ಪೂರ್ಣ ರಕ್ತಚಂದ್ರನ ದರ್ಶನವಾಗಿದೆ. ಇನ್ನುಳಿದ ಕೆಲ ಜಿಲ್ಲೆಗಳಲ್ಲಿ ಪೂರ್ಣ ಚಂದ್ರನ (Full Moon) ದರ್ಶನವಷ್ಟೇ ಲಭ್ಯವಾಗಿದ್ದು, ಗ್ರಹಣ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ.
ಇನ್ನೂ ನಮ್ಮ ಸುಳ್ಯದಲ್ಲೂ ಗ್ರಹಣ (ರಕ್ತ ಚಂದ್ರ) ಗೋಚರವಾಗಿದೆ. ಇದೇ ಸಮಯದಲ್ಲಿ ಮೈಸೂರು, ಮಂಡ್ಯ, ಹಾವೇರಿ, ಗದಗ, ಧಾರವಾಡ ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಗ್ರಹಣ ದರ್ಶನವಾಗಿದೆ. ಧಾರವಾಡದಲ್ಲೂ ಖಗ್ರಾಸ್ ಚಂದ್ರ ಗ್ರಹಣವನ್ನು ಟೆಲಿಸ್ಕೋಪ್ ಮೂಲಕ ವೀಕ್ಷಿಸಿದ್ದಾರೆ.

