
ಅರಂಬೂರು ಸೆ.7: ಇಲ್ಲಿನ ಯುವಕರ ಸಂಘಟನೆಯಾದ ಅಲ್ ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ 2024–25ನೇ ಸಾಲಿನ ವಾರ್ಷಿಕ ಮಹಾಸಭೆ ಅರಂಬೂರು ಮದ್ರಸಾ ಸಭಾಂಗಣದಲ್ಲಿ ನೆರವೇರಿತು. ಸಭೆಯಲ್ಲಿ ವಾರ್ಷಿಕ ವರದಿ ಮತ್ತು ಆಯವ್ಯಯ ಮಂಡನೆಯೊಂದಿಗೆ 2025–26ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಸಮಿತಿ 2025–26, ಗೌರವಾಧ್ಯಕ್ಷರಾಗಿ ಕಬೀರ್ ಲಿಮ್ರಾ, ಅಧ್ಯಕ್ಷರಾಗಿ ಆಸಿಫ್ ಪನ್ನೆ, ಉಪಾಧ್ಯಕ್ಷರು ಅಬ್ದುಲ್ ಕುಂಞ, ಸಫ್ವಾನ್ ಮಾಂಬ್ಲಿ, ಪ್ರಧಾನ ಕಾರ್ಯದರ್ಶಿ ನಿಸಾರ್ ಶೈನ್, ಜೊತೆ ಕಾರ್ಯದರ್ಶಿಗಳು ರಮೀಜ್ ಶೈನ್, ರೌಫ್ ಮಾಂಬ್ಲಿ, ಕೋಶಾಧಿಕಾರಿ ನಾಸಿರ್ ಪಾಲಡ್ಕ, ಜೊತೆ ಕೋಶಾಧಿಕಾರಿಗಳು ಆಶಿಕ್ ಸ್ಟಾರ್, ಅಶ್ಪಾಕ್ PR, ಮಾದ್ಯಮ ವಿಂಗ್ ಮುನೀರ್ ಶೈನ್ (ಹೆಡ್), ನಾಸಿರ್ ಮಾಂಬ್ಲಿ (ಅಸಿಸ್ಟೆಂಟ್), ಚಯರ್ & ಟೇಬಲ್ ಜಾವಿದ್ ಶೇಖ್, ಅಕಾಡೆಮಿಕ್ ವಿಂಗ್ ಮಿರಾಜ್ ಮಾಂಬ್ಲಿ, ಮೆಡಿಕಲ್ ವಿಂಗ್ ರಿಶಾದ್ ಪಾಲಡ್ಕ, ಅಭಿನಂದನಾ ವಿಂಗ್ ಸಂಶುದ್ದೀನ್ ಮಾಂಬ್ಲಿ ಆಯ್ಕೆಯಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ಲಾ ಕುಂಞ ವಹಿಸಿದರು. ಆಸಿಫ್ ಪನ್ನೆ ವರದಿ ಮಂಡಿಸಿದರು, ನಿಸಾರ್ ಶೈನ್ ಸ್ವಾಗತಿಸಿ , ನಿರೂಪಿಸಿದರು.

