ಉಡುಪಿ ಮತ್ತು ಚಿಕ್ಕ ಮಗಳೂರು ಜಿಲ್ಲೆಗಳ ಖಾಝಿ ಯವರಾದ ಹಾಗೂ ದಾರುಲ್ ಇರ್ಷಾದ್ ಮಾಣಿ ಇದರ ಸಂಸ್ಥಾಪಕ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ( ಮಾಣಿ ಉಸ್ತಾದ್ )ರವರು ಖಾಸಗಿ ಕಾರ್ಯಕ್ರಮ ನಿಮಿತ್ತ ಉದ್ಯಮಿ ಹಾರಿಸ್ ಬಾರ್ಪಣೆ ಯವರ ನೂತನ ಮನೆ ಬಾರ್ಪಣೆ ಹೈ ಟ್ಸ್ ಉದ್ಘಾಟನಾ ಸಮಾರಂಭ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುಳ್ಯದ ಮುಸ್ಲಿಂ ಸಮಾಜದ ಗಣ್ಯರು ಉಸ್ತಾದ್ ರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಜಂಇಯತುಲ್ ಉಲಮಾ ಅಧ್ಯಕ್ಷ ಅಸ್ಸಯ್ಯದ್ ಕುಂಞ ಕೋಯಾ ತಂಞಳ್, ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ, ಗಾಂಧಿನಗರ ಜುಮಾ ಮಸ್ಜಿದ್ ಖತೀಬರಾದ ಅಲ್ ಹಾಜ್ ಆಶ್ರಫ್ ಖಾಮಿಲ್ ಸಖಾಫಿ, ಉದ್ಯಮಿ ಹಾರಿಸ್ ಬಾರ್ಪಣೆ, ಅನ್ಸಾರಿಯ ಎಜುಕೇಶನ್ ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ, ಎಪಿಎಂಸಿ ಮಾಜಿ ನಿರ್ದೇಶಕ ಆದo ಹಾಜಿ ಕಮ್ಮಾಡಿ, ಮೊದಲಾವರು ಉಪಸ್ಥಿತರಿದ್ದರು.

