ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಜನ್ಮ ದಿನಾಚರಣೆಯನ್ನು ಕೊಂಡಾಡುವ ಈ ಸಂಧರ್ಭದಲ್ಲಿ ಅವರು ತಿಳಿಸಿ ಕಲಿಸಿ ಕೊಟ್ಟ ಮಾರ್ಗದಲ್ಲಿ ಪೈಚಾರಿನ ಅಲ್-ಮದೀನಾ ಚಾರಿಟೇಬಲ್ ಟ್ರಸ್ಟ್ ಅರ್ಹ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ವಿತರಿಸಲಾಯಿತು.
ಕಳೆದ ಏಳು ವರ್ಷಗಳಿಂದೀಚೆಗೆ ಕರೀಮ್ ಪೈಚಾರ್ ಹಾಗೂ ಅಶ್ರಫ್ ಪೈಚಾರ್ ಇವರ ಸಾರಥ್ಯದಲ್ಲಿ ಸಾಮಾಜಿಕ, ಧಾರ್ಮಿಕ, ಬಡ,ನಿರ್ಗತಿಕ ಹಾಗೂ ಅಸಾಹಯಕ ಕುಟುಂಬಗಳಿಗೆ ಧನ ಸಹಾಯ ರೂಪದಲ್ಲಿ, ಆಹಾರ ಸಾಮಾಗ್ರಿಗಳ ರೂಪಗಳಲ್ಲಿ, ಬಡ ವಧುವಿನ ಮದುವೆ ಇನ್ನಿತರ ಸಂಧರ್ಭದಲ್ಲೂ ಕೂಡಾ ಸಹಾಯ ಅಸ್ತ ನೀಡುವ ಮುಖ್ಯ ವಾಹಿನಿಯಾಗಿದೆ ಅಲ್-ಮದೀನಾ ಚಾರಿಟೇಬಲ್ ಟ್ರಸ್ಟ್. ಈ ಟ್ರಸ್ಟ್ ಇದೀಗ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) 1500 ನೇ ಜನ್ಮ ದಿನ ಅಂಗವಾಗಿ ಕಿಟ್ ವಿತರಣೆ ಹಾಗೂ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಒಬ್ಬರು ರೋಗಿಗೆ ಧನಸಹಾಯ ನೀಡಲಾಯಿತು.