ಲಂಚ ಸ್ವೀಕಾರ ವೇಳೆ ನಿರಾವರಿ ನಿಗಮದ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ
ಕೊಡಗು ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆಯಲ್ಲಿ ಭ್ರಷ್ಟ ಅಧಿಕಾರಿಯೋರ್ವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕುಶಾಲನಗರದ ಕಾವೇರಿ ನೀರಾವರಿ ನಿಗಮದ ಎಸ್ ಡಿ ಎ, ಆರ್ ಕೃಷ್ಣ ಎಂಬ ಅಧಿಕಾರಿ ಗುತ್ತಿಗೆದಾರ ಪ್ರಸನ್ನ ಅವರಿಂದ ರೂ 20 ಸಾವಿರ ರೂ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 30 ಸಾವಿರ ರೂ ಬೇಡಿಕೆಯಿಟ್ಟು ಅದರಲ್ಲಿ 20 ಸಾವಿರ ರೂ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ.
ಕೊಡಗು ಲೋಕಾಯುಕ್ತ ಡಿ ವೈ ಎಸ್ಪಿ ದಿನಕರಶೆಟ್ಟಿ ನೇತೃತ್ವದ ತಂಡದ ಅಧಿಕಾರಿ ದಾಳಿಮಾಡಿ ಹಣ ಸಹಿತ ಅಧಿಕಾರಿ ಕೃಷ್ಣ ರನ್ನು ಬಂಧಿಸಿದ್ದಾರೆ.
ದೂರುದಾರರು ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿದ್ದು ಕಾವೇರಿ ನೀರಾವರಿ ನಿಗಮದಿಂದ 99 ಸಾವಿರ ಮೊತ್ತದ ಎರಡು ಕೆಲಸಗಳನ್ನು ಒಂದು ವರ್ಷದ ಹಿಂದೆ ಮಾಡಿದ್ದು ಅದರ ಹಣ ಬಿಡುಗಡೆಗೆ ನಿಗಮದ ಅಧಿಕಾರಿಗಳು ಇವರ ಬಳಿ ಲಂಚಕ್ಕಾಗಿ ನಿರಂತರವಾಗಿ ಬೇಡಿಕೆ ಇಡುತ್ತ ಅವರನ್ನು ನಿಗಮದ ಕಚೇರಿಗೆ ಅಲೆದಾಡಿಸಿ ಹಣ ಪಾವತಿಸದೆ ಸತಾಯಿಸಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಹತಾಶೇಗೊಂಡ ಇವರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕೊಡಗು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿರುತ್ತಾರೆ.ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಲೋಕೇಶ್, ವೀಣಾ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಮುಖ್ಯ ಪೇದೆ ಲೋಕೇಶ್ ಸೇರಿದಂತೆ ಸಿಬ್ಬಂದಿಗಳಾದ ಮಂಜುನಾಥ್, ಶಶಿ, ಲೋಹಿತ್, ಪ್ರವೀಣ್ ಕುಮಾರ್, ದೀಪಿಕಾ, ಅರುಣ್ ಕುಮಾರ್, ಸಲಾಹುದ್ದಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವರದಿ: ಹಸೈನಾರ್ ಜಯನಗರ