ಹಿಮಾಯತುಲ್ ಇಸ್ಲಾಂ ಕಮಿಟಿ ಖಿಳ್ರಿಯ ಮಸ್ಜಿದ್ ಬಿಳಿಯಾರು ಅರಂತೋಡು ಇದರ ಆಶ್ರಯದಲ್ಲಿ ಸೆ.15 ರಂದು ಬಿಳಿಯಾರು ಮಸೀದಿ ವಠಾರದಲ್ಲಿ ನಡೆಯಲಿದೆ. ರಾತ್ರಿ 7 ಗಂಟೆಗೆ ಸಭಾ ಕಾರ್ಯಕ್ರಮ ವನ್ನೂ ಬಹು ಸಯ್ಯದ್ ಫಝಲ್ ಹಾಮಿದ್ ಕೊಯಮ್ಮ ತಂಘಲ್ ದುಗಲಡ್ಕ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಮೀದ್ ಹಾಜಿ ವಹಿಸಲಿದ್ದಾರೆ. ಪ್ರಾಸ್ತಾವಿಕ ಭಾಷಣ ವನ್ನು ಬಹು ಮಜೀದ್ ದಾರಿಮಿ ಮಾತನಾಡಲಿದ್ದಾರೆ. ಮುಖ್ಯ ಪ್ರಭಾಷಣ ಗಾರ ಉಸ್ತಾದ್ ಬಹು ಮುಸ್ತಫಾ ಹುದವಿ ಅಕ್ಕೊಡ್ ಆಗಮಿಸಲಿದ್ದಾರೆ.ಸಮಾರಂಭದಲ್ಲಿ ಹಲವಾರು ಧಾರ್ಮಿಕ ಸಾಮಾಜಿಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
