ಸುಳ್ಯ: ಅಸ್ತ್ರಸ್ಪೋರ್ಟ್ಸ್ ಕ್ಲಬ್ (ರಿ) ಪೈಚಾ‌ರ್ ಹಾಗೂ ಸುಳ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (S.B.A)
ಇದರ ಸಹಭಾಗಿತ್ವದಲ್ಲಿ ಸುಳ್ಯ, ಕಡಬ ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಸೆ. 14 ರಂದು ಸುಳ್ಯದ ಕುರುಂಜಿಭಾಗ್ ನಲ್ಲಿನ S.B.A ಒಳಾಂಗಣ ಕ್ರೀಡಾಂಗಣ ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.)ಸುಳ್ಯ ಇದರ ಪ್ರ. ಕಾರ್ಯದರ್ಶಿಯಾದ ಅಕ್ಷಯ್ KC ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ಅಧ್ಯಕ್ಷರಾದ ರಿಫಾಯಿ ಎಸ್.ಎ ವಹಿಸಿದರು. ವೇದಿಕೆಯಲ್ಲಿ ಮುಜೀಬ್ ಪೈಚಾರ್ ಸದಸ್ಯರು ಗ್ರಾಮ ಪಂಚಾಯತ್ ಜಾಲ್ಸೂರು, ಹೇಮಂತ್ ಕಾಮತ್ ಅಧ್ಯಕ್ಷರು ರೋಟರಿ ಸಿಟಿ ಸುಳ್ಯ, ನಝೀರ್ ಶಾಂತಿನಗರ ಅಧ್ಯಕ್ಷರು ಎಸ್ ಡಿ ಎಂ ಸಿ ಶಾಂತಿನಗರ ಶಾಲೆ, ರಿಝ್ವಾನ್ ಜನತಾ, ರಾಜೇಶ್ ಕಿರಿಬಾಗ ಯುವ ಉದ್ಯಮಿ ಆದಿಲಕ್ಷಿ ಕನ್ಸ್ಟ್ರಕ್ಷನ್ ಸುಳ್ಯ, ಹಿರಿಯ ಕ್ರೀಡಾಪಟು ಅಬ್ದುಲ್ ರಹಮಾನ್, ಹನೀಫ್ ಅಲ್ಫಾ, ಸತ್ತಾರ್ ಪಿ.ಎ ಉಪಸ್ಥಿತಿ ಇದ್ದರು

ಪಂದ್ಯಾವಳಿಯ ಮದ್ಯದಲ್ಲಿ ಆಗಮಿಸಿ ಮೆರುಗನ್ನು ನೀಡಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಅಶೋಕ್ ಕುಮಾ‌ರ್ ರೈ

ಪಂದ್ಯಾಕೂಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ರಾತ್ರಿ ಹತ್ತು ಗಂಟೆಗೆ ನಡೆಯಿತು. ಸಿರಾಜ್ ಮೈಲ್ ಕಾಲ್ ಮಾಲೀಕತ್ವದ ಕರಾವಳಿ ಕಿಂಗ್ಸ್ ಚಾಂಪಿಯನ್ ಹಾಗೂ ಸತ್ತಾರ್ ಪೈಚಾರ್ ಮಾಲೀಕತ್ವದ ಅಸ್ತ್ರ ಅವೇಂಜರ್ಸ್ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಬಹುಮಾನವನ್ನು ಆದರ್ಶ ವಿವಿದೋದ್ದೇಶ ಸಹಕಾರಿ ಸಂಘ ವ್ಯವಸ್ಥಾಪಕರಾದ ಮನೋಜ್ ಕುಮಾರ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಬಶೀರ್ ಆರ್. ಬಿ, ನಿವೃತ್ತ ಮೆಸ್ಕಾಂ ಇಂಜಿನಿಯರ್ ಶ್ರೀ ಬೋರಯ್ಯ, ಎಸ್ ಬಿ ಎ ನಿರ್ದೇಶಕರಾದ ವಿಜಯ ಪ್ರಕಾಶ್, ಎಸ್ ಬಿ ಎ ಸದಸ್ಯರಾದ ಗುರು ವಿಕ್ರಂ ಪ್ರಸಾದ್, ಮಹೇಶ್ ಎಂ, ಪ್ರೀತಮ್, ರಂಜಿತ್, ಮಾರ್ನಿಂಗ್ ಕ್ರಿಕೆಟರ್ಸ್ ಸದಸ್ಯರಾದ ಬಶೀರ್ ಕೆ.ಪಿ ಅಶ್ರಫ್ ಅದರ್ಶ ಮೊದಲಾದವರು ನೀಡಿ ಸಹಕರಿಸಿದರು. ನಾಸೀರ್ ಕೆ.ಪಿ ಸ್ವಾಗತಿಸಿ ಚೇತನ್ ಪೈಚಾರ್ ಅಭಿನಂದಿಸಿದರು.

Leave a Reply

Your email address will not be published. Required fields are marked *