ಸುಳ್ಯ ಗಾಂಧಿನಗರ ಕೆಪಿಎಸ್ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗಕ್ಕೆ 5 ಕೊಠಡಿ ಗಳ ನಿರ್ಮಾಣಕ್ಕೆ ರೂ 79 ಲಕ್ಷ ಅನುದಾನ ಮಂಜೂರಾ ಗಿದ್ದು ಸದ್ರಿ ಕಾಮಗಾರಿಗೆ ಸುಳ್ಯ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಭಾಗೀರಥಿ ಮುರುಳ್ಯ ಶಂಕುಸ್ಥಾಪನೆ ನೆರವೇರಿಸಿದರು ನಂತರ ಮಾತನಾಡಿದ ಶಾಸಕರು ಶಿಕ್ಷಣ ಮೂಲ ಭೂತ ಸೌಕರ್ಯ ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು, ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ) ಅಧ್ಯಕ್ಷ ಕೆ. ಎಂ. ಮುಸ್ತಫ ಶುಭ ಹಾರೈಸಿದರು, ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಪ್ರವಿತ, ಶರೀಫ್ ಕಂಠಿ ಪ್ರಾoಶುಪಾಲರಾದ ಶ್ರೀಮತಿ ಪರಮೇಶ್ವರಿ, ಉಪ ಪ್ರಾoಶುಪಾಲೆ ಜ್ಯೋತಿ, ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಶ್ರೀಮತಿ ಮಮತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಚಂದ್ರಾವತಿ, ಎಸ್ ಡಿ ಎಂ ಸಿ ಸದಸ್ಯರುಗಳಾದ ನವೀನ್ ಕುದ್ಪಾಜೆ, ವಿಜಯ ದೆಂಗೋಡಿ, ಅಝೀಜ್ ಫುಟ್ ವೆರ್, ಅನಿತಾ ಕಾಯರ್ತೋಡಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಣಿಕಂಠ, ಗುತ್ತಿಗೆದಾರ ಅಬ್ದುಲ್ ಜಲೀಲ್ ಮೊದಲಾದವರು ಉಪಸ್ಥಿತರಿದ್ದರು
ಎಸ್ ಡಿ ಎಂ ಸಿ ಅಧ್ಯಕ್ಷ ಚಿದಾನಂದ ಕುದ್ಪಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

