ರಾಣಿ ಅಬ್ಬಕ್ಕನ ದೇಶ ಪ್ರೇಮ ಇಂದಿನ ಹೆಣ್ಣು ಮಕ್ಕಳಿಗೆ ಪ್ರೇರಣೆ: ಲತೇಶ್ ಬಾಕ್ರಬೈಲ್

ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ) ಮಂಗಳೂರು ಮತ್ತು ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ, ಇತಿಹಾಸ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶ ಇದರ ಸಹಯೋಗದೊಂದಿಗೆ ದಿನಾಂಕ.೧೨.೦೯.೨೦೨೫ ರಂದು ಕಡಲ ರಾಣಿ ಉಳ್ಳಾಲ “ ಅಬ್ಬಕ್ಕ@ ೫೦೦ ಪ್ರೇರಣಾದಾಯಿ ೧೦೦ ಉಪನ್ಯಾಸ ಸರಣಿ ಎಸಳು ೫೬” ನೇ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್.ಎಂ.ಎ ಮಾತನಾಡಿ ರಾಣಿ ಅಬ್ಬಕ್ಕನ ನಾಯಕತ್ವ ಆಡಳಿತ ಮತ್ತು ಪೋರ್ಚುಗೀಸರ ವಿರುದ್ದ ಹೋರಾಟ ಮಾಡಿದ ಮಹತ್ವವನ್ನು ತಿಳಿಸಿದರು. ಉಪನ್ಯಾಸ ನೀಡಿದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯ ಸಹ ಕಾರ್ಯದರ್ಶಿ ಶ್ರೀ. ಲತೇಶ್ ಬಾಕ್ರಬೈಲ್‌ರವರು ಉಳ್ಳಾಲವನ್ನು ಆಳ್ವಿಕೆ ಮಾಡಿದ ರಾಣಿ ಅಬ್ಬಕ್ಕನ ದೇಶ ಪ್ರೇಮ ಇಂದಿನ ಹೆಣ್ಣು ಮಕ್ಕಳಿಗೆ ಪ್ರೇರಣೆ ಎಂಬುದಾಗಿ ತಮ್ಮ ಉಪನ್ಯಾಸವನ್ನು ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಡಾ. ಮಮತಾ ಕೆ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ. ರತ್ನಾವತಿ.ಡಿ, ಕಾರ್ಯಕ್ರಮದ ಸಂಯೋಜಕರಾದ ಡಾ. ಕಿರಣ್ ಚಂದ್ರ ರೈ , ಪ್ರೊ. ತಿಪ್ಪೇಸ್ವಾಮಿ ಡಿ.ಹೆಚ್ ಇತಿಹಾಸ ವಿಭಾಗದ ಮುಖ್ಯಸ್ಥರು, ಲತೀಶ್‌ಕುಮಾರ್.ಕೆ ಇತಿಹಾಸ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತೃತೀಯ ಬಿ.ಎ ವಿದ್ಯಾರ್ಥಿನಿಯರಾದ ಕುಮಾರಿ ಶ್ರೀಲಯಾ ಪ್ರಾರ್ಥಸಿ, ಕುಮಾರಿ ಕವಿತಾ ಸ್ವಾಗತಿಸಿ, ಕುಮಾರಿ ಸುಜಾನ ರೈ ಕಾರ್ಯಕ್ರಮವನ್ನು ನಿರೂಪಿಸಿ, ರಾಷ್ಟ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave a Reply

Your email address will not be published. Required fields are marked *