ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ವಾಣಿಜ್ಯ ಸಂಘದ 2025_26 ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 12ನೇ ಶುಕ್ರವಾರದಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರ ಕುಮಾರ ಎಂ ಎಂ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ಮೀರ ಕೆ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸ್ವ ಸಾಮರ್ಥ್ಯ, ವಿದ್ಯಾ ನೈಪುಣ್ಯತೆ,
ಪ್ರಾವೀಣ್ಯತೆ, ಹಾಗೂ ವ್ಯಕ್ತಿತ್ವ ನಿರ್ಮಾಣದಲ್ಲಿ ವಿದ್ಯಾರ್ಥಿ ಜೀವನ ಹಾಗೂ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿವರಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾದ ರತ್ನಾವತಿ ಡಿ ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಅವಕಾಶಗಳನ್ನು ಬಳಸಿಕೊಳ್ಳಿ ಎಂಬುದಾಗಿ ಶುಭ ಹಾರೈಸಿದರು. ಉಪನ್ಯಾಸಕರುಗಳಾದ ಶ್ರೀ ಶ್ರೀಧರ ವಿ, ಶ್ರೀಮತಿ ಗೀತಾ ಶೆಣೈ ಹಾಗೂ ಆಂತರಿಕ ಗುಣಮಟ್ಟ ಕಾತರಿಕೋಶದ ಸಂಚಾಲಕಿಯಾದ ಡಾ. ಮಮತಾ ಕೆ ರವರು ಉಪಸ್ಥಿತರಿದ್ದರು. ವಾಣಿಜ್ಯ ಸಂಘದ ಸಂಚಾಲಕಿಯಾದ ದಿವ್ಯ ಟಿ ಎಸ್ ಎಲ್ಲರನ್ನೂ ಸ್ವಾಗತಿಸಿದರು.ಕುಮಾರಿ ಅಕ್ಷತಾ ಪ್ರಾರ್ಥಿಸಿ ದ ಕಾರ್ಯಕ್ರಮವನ್ನು ದೀಕ್ಷಿತ ಜಿ ಆಚಾರ್ ಇವರು ನಿರೂಪಿಸಿದರು ವಿದ್ಯಾರ್ಥಿನಿಯಾದ ದೀಕ್ಷಾ ವಂದಿಸಿದರು . ಈ ವೇದಿಕೆಯಲ್ಲಿ ಕಳೆದ ಶೈಕ್ಷಣಿಕ ವರ್ಷ 2024_25ರಲ್ಲಿ ನಡೆದ ಆರನೇ ಸೆಮಿಸ್ಟರ್ ಬಿ.ಕಾಂ ಪರೀಕ್ಷೆಯಲ್ಲಿ (ನೂರರಲ್ಲಿ ನೂರು) ಪೂರ್ಣಾಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.
