ಸಮಸ್ತ ಗಲ್ಫ್ ಬ್ರದರ್ಸ್ ಕಟ್ಟತ್ತಾರು ಮಹತ್ವಕಾಂಕ್ಷಿ ಯೋಜನೆ ” ಪ್ರತಿಯೊಂದು ಮನೆಯಲ್ಲೂ ವೃತ್ತಿಪರರು” ಧ್ಯೇಯಯ ಕಾರ್ಯಕ್ರಮವು ದಿ ಅ.1 ರಂದು ಕಟ್ಟತ್ತಾರ್ ಮದ್ರಸ ಸಭಾಂಗಣದಲ್ಲಿ ಬಹಳ ಯಶಸ್ವಿಯಾಗಿ ನಡೆಯಿತು.
ಮುಂದಿನ ತಲೆಮಾರಿಗೆ ಮತ್ತು ಮುಂದಿನ ದಿನಗಳಲ್ಲಿ ಯುವ ಜನತೆಯಲ್ಲಿ ಇರಬೇಕಾದ ವಿಧ್ಯಾಭ್ಯಾಸ ಮಹತ್ವ ಮತ್ತು ವೃತ್ತಿಯ ಅಗತ್ಯತೆಯನ್ನು ಬಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಡಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ರಫೀಕ್ ಮಾಸ್ಟರ್ ಹಾಗೂ ಅಬ್ದುಲ್ ರಝಾಕ್ ಮಾಸ್ಟರ್ ಅನಂತಾಡಿ ಭಾಗವಹಿಸಿ ವಿಧ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ SGB ಸದಸ್ಯರು, ಕಟ್ಟತ್ತಾರ್ ಜಮಾಅತ್ ಕಮಿಟಿ ಸದಸ್ಯರು, ಕ್ಯಾಂಪಸ್ ವಿಂಗ್ ವಿದ್ಯಾರ್ಥಿ ಮಿತ್ರರು ಭಾಗವಹಿಸಿ ಸಹಕರಿಸಿದರು
ನೂರರಷ್ಟು ವಿದ್ಯಾರ್ಥಿಗಳು, ಪೋಷಕರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ಸಮಸ್ತ ಗಲ್ಫ್ ಬ್ರದರ್ಸ್ ರಾಷ್ಟ್ರೀಯ ಸಮಿತಿಯ ಈ ವಿಶೇಷ ಕಾರ್ಯಕ್ರಮಕ್ಕೆ ಊರ ನಾಗರಿಕರು ಅಭಿನಂದನೆ ಸಲ್ಲಿಸಿದರು.