ಸುಳ್ಯ: ಇಲ್ಲಿನ ಕನಕಮಜಲು ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಗ್ರಾಮ ಅಭಿವೃದ್ಧಿ ಅಧಿಕಾರಿಯಾಗಿ (PDO) ಕಾನೂನು ಬದ್ದವಾಗಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿ ಕರ್ತವ್ಯ ವನ್ನು ನಿರ್ವಹಿಸಿ ಇದೀಗ ನೆಲ್ಲೂರು ಕೆಮ್ರಾಜೆಗೆ ವರ್ಗಾವಣೆಗೊಂಡ ‘ಶ್ರೀಮತಿ ಸರೋಜಿನಿ’ ಯವರಿಗೆ ಸಕ್ಸಸ್ ಸುಣ್ಣಮೂಲೆ ಹೆಲ್ಪ್’ಲೈನ್ ವತಿಯಿಂದ ಕನಕಮಜಲು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಕಾಸಿಮ್ ಕೆ.ಎಂ, ಕ್ಲಬ್ ನ ಅಧ್ಯಕ್ಷರಾದ ಹಸನ್ ಗೌಸಿಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಅಬೂಬಕರ್ ಪೂಪಿ, ಸಕ್ಸಸ್ ಸುಣ್ಣಾಮೂಲೆ ಸಂಘಟನೆಯ ಮಾಜಿ ಅಧ್ಯಕ್ಷ ಶರೀಫ್ ಎ.ಕೆ, ರಫೀಕ್, ಹುಸೈನ್ ಗೌಸಿಯ ಮೊದಲಾದವರು ಉಪಸ್ಥಿತರಿದ್ದರು.

