ಕ್ರಿಕೆಟ್ (Cricket) ಇತಿಹಾಸದಲ್ಲೇ ವೆಸ್ಟ್ ಇಂಡೀಸ್ ತಂಡ (West indies) ಹೊಸ ದಾಖಲೆ ಸೃಷ್ಟಿ ಮಾಡಿದೆ. ಹೌದು ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶ (Bangladesh) ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ವೇಗಿಗಳಿಲ್ಲದೆ, ಕೇವಲ ಸ್ಪಿನ್ (Spin) ಬೌಲರ್ಗಳನ್ನೇ ಬಳಸಿಕೊಂಡು 50 ಓವರ್ ಪೂರೈಸಿದ್ದು,ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.
ಈ ಘಟನೆಗೆ ಢಾಕಾ ಮಿರ್ಪುರದ ಶೇರ್ ಬಾಂಗ್ಲಾ ನ್ಯಾಶನಲ್ ಸ್ಟೇಡಿಯಂ ಸಾಕ್ಷಿಯಾಗಿದೆ.
ಢಾಕಾದಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಮ್ಮ ವೇಗದ ಬೌಲರ್ಗಳನ್ನು ಹೊರಗಿಟ್ಟು, ಕೇವಲ ಸ್ಪಿನ್ನರ್ಗಳೊಂದಿಗೆ ಆಡುವ ನಿರ್ಧಾರ ಮಾಡಿದ್ದಾರೆ. ವಿಂಡೀಸ್ ತಂಡದ ಈ ತಂತ್ರ ಅವರಿಗೆ ಗೆಲುವು ತಂದುಕೊಟ್ಟಿದೆ. ಪಿಚ್ ನಲ್ಲಿ ಚೆಂಡು ಹೆಚ್ಚು ತಿರುವು ಪಡೆಯುತ್ತಿರುವುದನ್ನು ಗಮನಿಸಿ ವಿಂಡೀಸ್ ಈ ತಂತ್ರ ಪ್ರಯೋಗಿಸಿದೆ.
ಕೇವಲ ಸ್ಪಿನ್ನರ್ ಗಳನ್ನೇ ಬಳಸಿಕೊಂಡ ವೆಸ್ಟ್ ಇಂಡೀಸ್ ತಂಡ, ಬಂಗಾಳದೇಶವನ್ನು ಕೇವಲ 213 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಇದ್ದ ಏಕೈಕ ವೇಗದ ಬೌಲರ್ ಆಲ್-ರೌಂಡರ್ ಜಸ್ಟಿನ್ ಗ್ರೀವ್ಸ್. ಆದರೆ ಅವರೂ ಕೂಡ ಬೌಲಿಂಗ್ ಮಾಡಿಲ್ಲ. ಹೀಗಾಗಿ
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಪಿನ್ ಓವರ್ಗಳನ್ನು ಬೌಲ್ ಮಾಡಿದ ದಾಖಲೆ ಶ್ರೀಲಂಕಾ ಹೆಸರಿನಲ್ಲಿತ್ತು.ಇದೀಗ ಅದು ವೆಸ್ಟ್ ಇಂಡೀಸ್ ಪಾಲಾಗಿದೆ.



Source:navasamaja.com
