ಸೌತ್ ಸಿನಿ (South Cinema) ಇಂಡಸ್ಟ್ರಿಯಲ್ಲಿ (South Cinema Industry) ಕರಿ ನೆರಳಾಗಿ ಕಾಡುವ ತಮಿಳ್ ರಾಕರ್ಸ್ ಹೆಚ್ಚಿನ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದೆ. ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಾಣ ಮಾಡಿದ ಸಿನಿಮಾಗಳನ್ನು ಕೆಲವೇ ಸೆಕೆಂಡ್ನಲ್ಲಿ ಹ್ಯಾಕ್ ಮಾಡಿ, ಇವರು ವೆಬ್ಸೈಟ್ಗಳನ್ನು ಶೇರ್ ಮಾಡುತ್ತಿದ್ದರು.
ಇನ್ನು ಸಿನಿಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಥಿಯೇಟರ್ ಪ್ರಿಂಟ್ ಮತ್ತು ಕೆಲ ದಿನಗಳ ನಂತರ ಹೆಚ್ಡಿ ಕ್ವಾಲಿಟಿಯಲ್ಲಿ ಮೊಬೈಲ್ಗಳಿಗೆ ಬಂದುಬಿಡುತ್ತದೆ. ಇನ್ನು ಕೆಲವೊಮ್ಮೆ ಈ ಸಿನಿಮಾಗಳನ್ನು ಸಿಡಿ ರೂಪದಲ್ಲಿಯೂ ಮಾರಾಟ ಮಾಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ, ಜನರು ಥಿಯೇಟರ್ಗಿಂತ ಮೊಬೈಲ್ನಲ್ಲಿಯೇ ಹೆಚ್ಚಾಗಿ ಸಿನಿಮಾಗಳನ್ನು ನೋಡುತ್ತಿದ್ದಾರೆ. ಒಂದು ರೀತಿಯಲ್ಲಿ ಪೈರಸಿ ಟ್ರೆಂಡ್ ಹೆಚ್ಚಾಗಿದೆ ಅಂತಾನೇ ಹೇಳಬಹುದು. ಇದರಿಂದ ಥಿಯೇಟರ್ನಲ್ಲಿ ಜನವೂ ಬಾರದೆ ನಿರ್ಮಾಪಕರು ಭಾರೀ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಬಹುತೇಕರು ಪೊಲೀಸ್ ಠಾಣೆಗೆ ಪೈರಸಿ ವಿರುದ್ಧ ದೂರುಗಳನ್ನು ನೀಡಿದ್ದಾರೆ.
ಆದ್ರೆ ಈ ದೂರಿಗೆ ಇವತ್ತಿನವರೆಗೂ ಯಾವುದೇ ಪ್ರತಿಫಲ ಸಿಕ್ಕಿರಲಿಲ್ಲ. ತಮಿಳ್ ರಾಕರ್ಸ್ ಆರ್ಭಟ ಜೋರಾಗಿಯೇ ಇತ್ತು. ಆದರೆ ಇದೀಗ ಸಿನಿ ನಿರ್ಮಾಪಕರಿಗೆ ಗುಡ್ ನ್ಯೂಸ್. ಅದೇನೆಂದರೆ ಮಧುರೈನಲ್ಲಿ ತಮಿಳ್ ರಾಕರ್ಸ್ ವೆಬ್ಸೈಟ್ ಅಡ್ಮಿನ್ನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಕೇರಳದ ತಿರುವನಂತಪುರಂನಲ್ಲಿರುವ ಏರಿಯಾಸ್ ಥಿಯೇಟರ್ನಲ್ಲಿ ನಟ ಧನುಷ್ ಅಭಿನಯದ ರಾಯನ್ ಚಿತ್ರದ ರೆಕಾರ್ಡಿಂಗ್ ಮಾಡುತ್ತಿದ್ದಾಗ ತಮಿಳ್ ರಾಕರ್ಸ್ ಸೈಟ್ ನ ಅಡ್ಮಿನ್ ಸ್ಟೀಫನ್ ರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.ಇನ್ನು ಬಂಧಿತ ಸ್ಟೀಫನ್ ರಾಜ್ನ ವಿಚಾರಣೆ ವೇಳೆ ಕೆಲವೊಂದು ರಹಸ್ಯ ಸಂಗತಿಗಳನ್ನು ಬಾಯಿಬಿಟ್ಟಿದ್ದಾನೆ ಎಂದು ವರದಿಯಾಗಿದೆ. ಈ ಮೂಲಕ ಸ್ಟೀಫನ್ ಒಂದು ವರ್ಷಗಳಿಂದಲೂ ಹೊಸ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಮೊದಲಿಗೆ ಬರುತ್ತಿದ್ದನಂತೆ. ಹಾಗೆತೇ ಸೀಟಿನಲ್ಲಿ ಚಿಕ್ಕ ಕ್ಯಾಮೆರಾ ಅಳವಡಿಸಿ ಹೊಸ ಚಿತ್ರಗಳ ವಿಡಿಯೋ ತೆಗೆಯುತ್ತಿದ್ದ ಎಂದು ಹೇಳಿದ್ದಾನೆ. ಒಂದು ವರ್ಷದಿಂದಲೂ ಹೊಸ ಚಿತ್ರಗಳನ್ನು ಅಪ್ಲೋಡ್ ಮಾಡುತ್ತಿದ್ದೇನೆ ಎಂದು ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಚಿತ್ರವೊಂದಕ್ಕೆ 5 ಸಾವಿರ ರೂಪಾಯಿ ಕಮಿಷನ್ ಪಡೆದು ವೆಬ್ಸೈಟ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ಬಾಯಿ ಬಿಟ್ಟಿದ್ದಾನೆ. ಇತ್ತೀಚೆಗೆ ಬಾಲಿವುಡ್, ಹಾಲಿವುಡ್, ಸ್ಯಾಂಡಲ್ವುಡ್ನಲ್ಲಿ ವಾರಕ್ಕೆ ಒಂದಾದ್ರೂ ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತದೆ. ಆದ್ರೆ ಕೆಲ ಸಿನಿಮಾಗಳು ಸೂಪರ್ ಹಿಟ್ ಆದ್ರೆ, ಇನ್ನೂ ಕೆಲವು ಸಿನಿಮಾಗಳು ಒಂದೇ ದಿನದಲ್ಲಿ ಥಿಯೇಟರ್ನಿಂದ ಹೋಗುತ್ತದೆ. ಇದರ ಹಿಂದೆ ಕೆಲವೊಮ್ಮೆ ಸಿನಿಮಾ ಕಾರಣಗಳಾದ್ರೆ, ಇನ್ನೂ ಕೆಲವೊಮ್ಮೆ ಪೈರಸಿ ಕಾರಣ ಅಂತಾನೇ ಹೇಳ್ಬಹುದು. ಪೈರಸಿ ಮಾಡೋದ್ರಲ್ಲಿ ಪಂಟರ್ ಎಂದುಕೊಂಡಿದ್ದ ತಮಿಳ್ ರಾಕರ್ಸ್ ವಿರುದ್ಧ ಈಗಾಗಲೇ ಸೈಬರ್ ಕ್ರೈಮ್ ಪೊಲೀಸರು ಹಲವು ಬಾರಿ ಕ್ರಮ ಕೈಗೊಂಡಿದ್ದರು. ಆದ್ರೆ ಎಷ್ಟೇ ಸಲ ಕ್ರಮ ಕೈಗೊಂಡರು ಇವರು ಮತ್ತೆ ಹೊಸ ಐಡಿ ಕ್ರಿಯೇಟ್, ಪಾಸ್ವರ್ಡ್ ಕ್ರಿಯೇಟ್ ಮಾಡಿಕೊಂಡು ಸಿನಿಮಾಗಳನ್ನು ಕದ್ದು, ತಮ್ಮ ವೆಬ್ಸೈಟ್ಗಳಲ್ಲಿ ಶೇರ್ ಮಾಡುತ್ತಲೇ ಇದ್ದರು. ಆದರೆ ಇದೀಗ ಪೊಲೀಸರು ಈ ಅಕ್ರಮಕ್ಕೆ ತೆರೆ ಎಳೆದಿದ್ದಾರೆ.