ಪೈಚಾರ್: ಪಿರ್ಸಪ್ಪಾಡ್ ಬ್ರದರ್ಸ್ ವತಿಯಿಂದ ಸೌಹಾರ್ದ ಟ್ರೋಫಿ 2025, ಮೂರನೇ ಆವೃತ್ತಿಯ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ನ.09 ರಂದು ಶಾಂತಿನಗರ ಸ್ಟೇಡಿಯಂ ನಲ್ಲಿ ನಡೆಯಿತು. ಹಾಗೂ ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರಿಗೆ ಸನ್ಮಾನ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಯಿತು. ಪಂದ್ಯಾಟದ ಉದ್ಘಾಟನೆಯನ್ನು ಹನೀಫ್ ಆಲ್ಫ ನೆರವೇರಿಸಿದರು. ಅಧ್ಯಕ್ಷತೆಯನ್ನು ಮುಜೀಬ್ ಪೈಚಾರ್ ವಹಿಸಿದರು. ವೇದಿಕೆಯಲ್ಲಿ ರಾಮಕೃಷ್ಣ ಶಾಂತಿನಗರ, ಹರಿ ಶಾಂತಿನಗರ ಉಪಸ್ಥಿತರಿದ್ದರು.
ಒಟ್ಟು ಮೂವತ್ತಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದು, ಪಂದ್ಯಾಕೂಟದ ಚಾಂಪಿಯನ್ ಆಗಿ ನ್ಯೂ ಗೇಮ್ಸ್ ಮಾಡಾವು ತಂಡ ಹೊರಹೊಮ್ಮಿದರೆ, ಆಲ್ಫಾ ಸ್ಟ್ರೈಕರ್ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವೈಯಕ್ತಿಕ ಬೆಸ್ಟ್ ಬೌಲರ್ ಆಗಿ ಶಿಹಾಬ್ ರೆಡ್ಲೈನ್, ಬೆಸ್ಟ್ ಕೀಪರ್ ಆಗಿ ಆಶಿಕ್, ಬ್ಯಾಟ್ಸಮನ್ ಆಗಿ ಆರಿಫ್ ಪೈಚಾರ್, ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಶಕೂರ್, ಮ್ಯಾನ್ ಆಫ್ ದಿ ಸೀರಿಸ್ ಪ್ರಶಸ್ತಿಯನ್ನು ಹಾರಿಸ್ ಮಾಡಾವು ಪಡೆದುಕೊಂಡರು. ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಹೆಸರುಗಳಿಸಿದ ರಿಫಾಯಿ ಎಸ್.ಎ ಹಾಗೂ ಅಶ್ರಫ್ ಹಿಂದುಸ್ಥಾನ್, ಕ್ರೀಡಾ ಕ್ಷೇತ್ರದಲ್ಲಿ ಕೇರಳ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಅಫ್ನಾಝ್ ಇವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಮುಜೀಬ್ ಪೈಚಾರ್, ನಝೀರ್ ಶಾಂತಿನಗರ, ರಿಫಾಯಿ ಎಸ್.ಎ, ಹನೀಫ್ ಆಲ್ಫಾ, ಪ್ರವೀಣ್ ಶಾಂತಿನಗರ, ಸತ್ತಾರ್ ಪೈಚಾರ್ ಉಪಸ್ಥಿತರಿದ್ದರು.




