ಸುಳ್ಯ ಮೋಡೆಲ್ ಎಜುಕೇಶನ್ ಟ್ರಸ್ಟ್ ಇದರ ಆಶ್ರಯದಲ್ಲಿರುವ ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಯಲ್ಲಿ ಸ್ವತಂತ್ರ ಭಾರತ ದ ಮೊದಲ ಪ್ರಧಾನಿ ಪಂಡಿತ್ ಜವಾಹಾರ್ ಲಾಲ್ ನೆಹರೂ ರವರ ಜನ್ಮ ದಿನಾಚರಣೆ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಯಿತು
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಹಾಜಿ ಕೆ. ಎಂ. ಅಬ್ದುಲ್ ಮಜೀದ್ ವಹಿಸಿದ್ದರು
ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ನೆಹರೂ ರವರ ಜೀವನ ಚರಿತ್ರೆ ಯನ್ನು ಪ್ರಸ್ತುಪಡಿಸಿದರು
ಶಾಲಾ ವಿದ್ಯಾರ್ಥಿ ನಾಯಕ ಅಲ್ಲಾಹುದ್ದಿನ್ ಉಪ ನಾಯಕ ಮಹಮ್ಮದ್ ಮಿಸ್ಬಾ ಗಿಡಕ್ಕೆ ನೀರುಣಿಸಿ ಮಕ್ಕಳ ದಿನಾಚರಣೆಗೆ ಚಾಲನೆ ನೀಡಿದರು
ವೇದಿಕೆ ಯಲ್ಲಿ ಮುಖ್ಯ ಗುರುಗಳಾದ ಇಲ್ಯಾಸ್ ಕಾಶಿಪಟ್ಣ, ಶಿಕ್ಷಕಿ ಜಯಂತಿ, ರಂಜಿತ್, ದೇವಕಿ ರಕ್ಷಕ ಶಿಕ್ಷಕ ಸಂಘದ ನಿರ್ದೇಶಕ ಸಿದ್ದೀಕ್ ಕಟ್ಟೆಕ್ಕಾರ್ಸ್ ಮೊದಲಾದವರು ಉಪಸ್ಥಿತರಿದ್ದರು




