ಉಡುಪಿ: ಜಿಲ್ಲೆಯ (Udupi) ಕಿನ್ನಿಮುಲ್ಕಿಯ ಬಳಿ ಘೋರ ಘಟನೆಯೊಂದು ನಡೆದಿದ್ದು, ತಾಯಿಯ ಕೈಯಿಂದ ಜಾರಿ ಮಗುವೊಂದು ಬಾವಿಗೆ ಬಿದ್ದು (Fall down) ಮೃತಪಟ್ಟಿರುವ (Crime) ಘಟನೆ ನಡೆದಿದೆ.

ಮೃತ ಮಗುವನ್ನು ಕೀರ್ತನ ಎಂದು ಗುರುತಿಸಲಾಗಿದೆ. ತಾಯಿ ನಯನ ಬಾವಿಯ ಬಳಿ ನೀರು ಸೇದುತ್ತಾ ಇದ್ದ ವೇಳೆ ಕೈಯಲ್ಲಿದ್ದ ಮಗು ಆಯತಪ್ಪಿ ಜಾರಿ ನೀರಿಗೆ ಬಿದ್ದಿದೆ, ಕೂಡಲೇ ತಾಯಿ ಕೂಡ ಬಾವಿಗೆ ಹಾರಿ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಮಗು ಬಾವಿಗೆ ಬೀಳುತ್ತಿದ್ದಂತೆ ಹಿಂದೆ ಮುಂದೆ ನೋಡದ ತಾಯಿ ನಯನ ಹಗ್ಗದ ಸಹಾಯದಿಂದ ಕೂಡಲೇ ಮಗುವಿನ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ಮಗು ಮುಳುಗಿ ಸಾವನ್ನಪ್ಪಿತ್ತು. ಸದ್ಯ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಯಿ ಮಗು ಇಬ್ಬರನ್ನೂ ಮೇಲಕ್ಕೆ ಎತ್ತಲಾಗಿದೆ.

Courtesy: navasamaja

Leave a Reply

Your email address will not be published. Required fields are marked *