ಸುಳ್ಯ: ಎ.ಕೆ ಫ್ರೆಂಡ್ಸ್ ಸುಳ್ಯ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಆಟಗಾರರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಡ.21 ರಂದು ಪ್ರಥಮ ದರ್ಜೆ ಕಾಲೇಜು ಕೊಡಿಯಾಲ್’ಬೈಲ್ ಮೈದಾನದಲ್ಲಿ ನಡೆಯಿತು. ಸೀಮಿತ ಓವರುಗಳ ಅತ್ಯಂತ ಸುಂದರ ಪಂದ್ಯಾಕೂಟ ಇದಾಗಿದ್ದು ಒಟ್ಟು ಹದಿನಾರು ತಂಡಗಳು ಭಾಗವಹಿಸಿದ್ದವು.
ಫೈನಲ್ ಹಣಾಹಣಿಯಲ್ಲಿ ಅಸ್ತ್ರ ಪೈಚಾರ್, ಓಂ ಅಡ್ಕಾರ್ ವಿರುದ್ಧ ಗೆದ್ದುಕೊಂಡು ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಿತು. ಪ್ರತಿಯೊಂದು ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಪಡೆದ ಆಟಗಾರನಿಗೆ ಕ್ರಿಸ್ಮಸ್ ಕೇಕ್ ಹಾಗೂ ತಂಪು ಪಾನೀಯ ನೀಡಿ ಗೌರವಿಸಲಾಯಿತು. ಇನ್ನೂ ವೈಯಕ್ತಿಕ ಬೆಸ್ಟ್ ಬೌಲರ್ ಆಗಿ ಲಿತೇಶ್ (ಅಸ್ತ್ರ ಪೈಚಾರ್), ಬೆಸ್ಟ್ ಕೀಪರ್ ಆಗಿ ದೀರಜ್ (ಓಂ ಅಡ್ಕಾರ್), ಬೆಸ್ಟ್ ಫೀಲ್ಡರ್ ಆಗಿ ಆಶ್ರಫ್ (ಅಸ್ತ್ರ ಪೈಚಾರ್), ಬೆಸ್ಟ್ ಬ್ಯಾಟ್ಸಮನ್ ಆಗಿ ದಿಲೀಪ್ (ಓಂ ಅಡ್ಕಾರ್), ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಝುಬೈರ್ ಉಬಿ (ಅಸ್ತ್ರ ಪೈಚಾರ್), ಮ್ಯಾನ್ ಆಫ್ ದಿ ಸೀರಿಸ್ ಶಿಹಾಬ್ ಪೈಚಾರ್ (ಅಸ್ತ್ರ ಪೈಚಾರ್) ಪಡೆದುಕೊಂಡರು.
