ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮವು ಸುಳ್ಯ ತಾಲೂಕಿನ ಸ. ಹಿ. ಪ್ರಾಥಮಿಕ ಶಾಲೆ, ಮುಳ್ಯ ಅಟ್ಲೂರಿನಲ್ಲಿ ನಡೆಯಿತು. ಟ್ರಸ್ಟ್‌ನ ಗೌರವ ಅಧ್ಯಕ್ಷರಾದ ಬಾಲಕೃಷ್ಣ ಬೊಳ್ಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರರಾದ ಫಾಲಚಂದ್ರ ವೈ.ವಿ, ಸಲಹಾ ಸಮಿತಿ ಸದಸ್ಯರಾದ ಡಾ. ಅನುರಾಧಾ ಕುರುಂಜಿ, ಸ್ಥಳೀಯ ಸಮಿತಿಯ ಗೌರವ ಸಂಚಾಲಕರಾದ ಶಿವರಾಮ್ ಕೇನಾಜೆ, ಸಂಚಾಲಕರಾದ ನಾಗರಾಜ್ ಮುಳ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕಿರಣ್ ಅಟ್ಲೂರು, ಶಾಲಾ ಮುಖ್ಯೋಪಾಧ್ಯಾಯರಾದ ರವಿಕುಮಾರ್, ಎಸ್.ಡಿ.ಎಂ .ಸಿ ಅಧ್ಯಕ್ಷರಾದ ಚಂದ್ರಶೇಖರ, ಮಹಾಗಣಪತಿ ಭಜನಾ ಮಂದಿರದ ಅಧ್ಯಕ್ಷರಾದ ಪ್ರಕಾಶ್ ತೋರಣಗಂಡಿ, ಸೇವ ಸಂಗಮ ಟ್ರಸ್ಟ್ ನ ನಿಯೋಜಿತ ಅಧ್ಯಕ್ಷರಾದ ಯಶವಂತ್ ಜಯನಗರ, ಪ್ರಧಾನ ಕಾರ್ಯದರ್ಶಿ ವಿಶ್ವಕಿರಣ್, ಹೇಮನಾಥ, ಸುಜಿತ್ , ಸೌಜನ್ಯ , ಸುಶಾಂತ್ , ಜೀವನ್ , ಗಗನ್, ಭವ್ಯಶ್ರೀ , ಪುನೀತ್ , ಚರಿತ್, ತೀರ್ಥೇಶ್ , ಶೇಖರ್ ಅಟ್ಲೂರು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಶಮಾನೋತ್ಸವ ಕಾರ್ಯಕ್ರಮದ ಪೂರ್ವಬಾವಿ ಸಭೆ ನಡೆಯಿತು. ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿ ಕಾರ್ಯಕ್ರಮದ ಯಶಸ್ಸಿಗೆ ಹಲವು ಸಮಿತಿಗಳನ್ನು ರೂಪುಗೊಳಿಸಲಾಯಿತು, ದಶಮಾನೋತ್ಸವ ಕಾರ್ಯಕ್ರಮವನ್ನು “ಮುಳ್ಯೋತ್ಸವ” ಎಂಬ ಶೀರ್ಷಿಕೆಯಡಿಯಲ್ಲಿ ನಡೆಸಲು ತೀರ್ಮಾನಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರವನ್ನು ಕೋರಲಾಯಿತು.
