ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ತರಬೇತಿ ನೀಡುವ ಉದ್ದೇಶದಿಂದ ನೂತನವಾಗಿ ರೂಪುಗೊಂಡ ವಿದ್ಯಾಸಂಸ್ಥೆ ಜ್ಞಾನಾಮೃತ ಟ್ಯೂಷನ್ ಸೆಂಟರ್ ಡಿ.25 ರಂದು ಅರಂತೋಡು ಮುಖ್ಯ ರಸ್ತೆಯಲ್ಲಿರುವ ಪುಷ್ಪಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಳ್ಳಲಿದೆ.ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ನಿವೃತ ಪ್ರಾಂಶುಪಾಲ.ಕೆ. ಆರ್.ಗಂಗಾಧರ ಉದ್ಘಾಟಿಸಲಿದ್ದಾರೆ. ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ,ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಮುಖ್ಯ ಶಿಕ್ಷಕ ಸೋಮ ಶೇಖರ ಪಿಂಡಿಮನೆ,ತೊಡಿಕಾನ ಮೆತ್ತಡ್ಕ ಪಾರೆಪ್ಪಾಡಿ ಕುಟುಂಬ ಹಿರಿಯರಾದ ಶ್ರೀನಿವಾಸ ಮೆತ್ತಡ್ಕ ,ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪಂಜಿ ಕೋಡಿ,ಕಟ್ಟಡ ಮಾಲಕ ಈಶ್ವರ ಉಳುವಾರು ಭಾಗವಹಿಸಲಿದ್ದಾರೆ. 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಮತ್ತು ವಿಜ್ಞಾನ ವಿಭಾಗದ ಪಿಯುಸಿ ವಿದ್ಯಾರ್ಥಿಗಳಿಗೆ ಎಲ್ಲ ವಿಷಯಗಳಲ್ಲಿ ಟ್ಯೂಷನ್ ನೀಡಲಾಗುವುದು. ಎಂದು ಕು. ಸುಷ್ಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

