
ಕರ್ನಾಟಕ ಕಾರ್ಮಿಕರ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ರಾಗಿ ಕಳೆದ 3 ತಿಂಗಳ ಹಿಂದೆ ನೇಮಕ ಗೊಂಡಿದ್ದ ಟಿ. ಎಂ. ಶಹೀದ್ ರವರಿಗೆ ರಾಜ್ಯ ಸಂಪುಟ ಸಚಿವ ಸ್ಥಾನ ಮಾನ ನೀಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಸಚಿವ ಸ್ಥಾನ ಮಾನ ಪಡೆದ ಸುಳ್ಯ ವಿಧಾನ ಸಭಾ ಕ್ಷೇತ್ರದ ಪ್ರಥಮ ನಿಗಮ/ ಮಂಡಳಿ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇಂದು ಸುಳ್ಯಕ್ಕೆ ಆಗಮಿಸಿದ ಟಿ. ಎಂ. ಶಹೀದ್ ರವರನ್ನು ಸುಳ್ಯ ನಗರ ಯೋಜನಾ ಪ್ರಾಧಿಕಾರ ( ಸೂಡ ) ಅಧ್ಯಕ್ಷ ಕೆ. ಎಂ. ಮುಸ್ತಫ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿ ಗಳು ಅದ್ದೂರಿಯಾಗಿ ಸ್ವಾಗತಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ನಿಕಟ ಪೂರ್ವ ಸದಸ್ಯರುಗಳಾದ ಶರೀಫ್ ಕಂಠಿ, ಸಿದ್ದೀಕ್ ಕೊಕ್ಕೋ, ರಿಯಾಜ್ ಕಟ್ಟೆಕ್ಕಾರ್ಸ್, ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಖಜಾಂಚಿ ಕೆ. ಬಿ. ಇಬ್ರಾಹಿಂ, ತೋಟ ತೊಯಿ ಳಾಲರ್ ಕಾರ್ಮಿಕ ಸಂಘಟನೆ ಅಧ್ಯಕ್ಷ ಗಣೇಶ್ ಕೆ. ಎಫ್ ಡಿ ಸಿ,ಉದ್ಯಮಿ ಸಲೀಂ ಪೆರುoಗೋಡಿ, ಕಲ್ಲುಮುಟ್ಲು ಬೂತ್ ಅಧ್ಯಕ್ಷ ಹಸೈನಾರ್ ಅಚ್ರು, ಜಮೀಯ್ಯತ್ತುಲ್ ಫಲಾಹ್ ಸುಳ್ಯ ತಾಲೂಕು ಘಟಕ ಉಪಾಧ್ಯಕ್ಷ ಅಬ್ದುಲ್ ಖಾದರ್ ಕಲ್ಲುಗುಂಡಿ,ಸುಳ್ಯ ಗುತ್ತಿಗೆ ದಾರರ ಸಂಘದ ಅಧ್ಯಕ್ಷ ಲತೀಫ್ ಎಂ. ಕೆ, ಪೀಸ್ ಸ್ಕೂಲ್ ಸಂಚಾಲಕ ಸಂಶುದ್ದೀನ್ ಬೊಳುಬೈಲು, ನಾವೂರು ಬೂತ್ ಅಧ್ಯಕ್ಷ ಹನೀಫ್ ಬೀಜಕೊಚ್ಚಿ,ಸುಳ್ಯ ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಕಾರ್ಯದರ್ಶಿ ಮನ್ಸೂರ್ ಮೆಟ್ರೋ ಮೊದಲಾದವರು ಉಪಸ್ಥಿತರಿದ್ದರು.

