ಬೆಳ್ಳಾರೆ: ಸೌಹಾರ್ದ ಗೆಳೆಯರ ಬಳಗ ಬೆಳ್ಳಾರೆ ಇದರ ಆಶ್ರಯದಲ್ಲಿ ಸುಳ್ಯ ತಾಲೂಕಿನ ಗ್ರಾಮ-ಗ್ರಾಮಗಳ ಹನ್ನೊಂದು ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ ‘ಸೌಹಾರ್ದ ಟ್ರೋಫಿ-2025’ ಡಿ.25 ರಂದು ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ನಡೆಯಿತು. ಉದ್ಘಾಟನೆಯನ್ನು ಶ್ರೀ ಅಬೂಬಕ್ಕರ್ ಹಾಜಿ ಮಂಗಳ ಅಧ್ಯಕ್ಷರು, ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ನೆರವೇರಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಅಬ್ದುಲ್ ಖಾದರ್ ಹಾಜಿ ಬೆಳ್ಳಾರೆ ಸಂಚಾಲಕರು, ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಶ್ರೀ ವಿಠಲ್ ದಾಸ್ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಬೆಳ್ಳಾರೆ ಹಾಗೂ ಹಾಲಿ ಸದಸ್ಯರು, ಗ್ರಾಮ ಪಂಚಾಯತ್ ಬೆಳ್ಳಾರೆ, ಶ್ರೀ ಹಮೀದ್ ಹೆಚ್.ಎಂ ಕೆ.ಪಿ.ಸಿ.ಸಿ ರಾಜ್ಯ ಕಾರ್ಮಿಕ ಸಂಘದ ಕಾರ್ಯದರ್ಶಿ, ಶ್ರೀ ಝಕರಿಯಾ ನಿಡ್ಮಾರ್ ಕೋಶಾಧಿಕಾರಿ, ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಮಾಲಕರು, ಎನ್.ಎಮ್ ಇಂಡಸ್ಟ್ರೀಸ್ ಬೆಳ್ಳಾರೆ ಉಪಸ್ಥಿತರಿದ್ದರು. ಪಂದ್ಯಕೂಟದಲ್ಲಿ ಸುಳ್ಯ ತಾಲೂಕಿನ ಬಲಿಷ್ಠ ತಂಡಗಳು ಸೆಣಸಾಡಿದ್ದವು. ಚಾಂಪಿಯನ್ ಪಟ್ಟವನ್ನು ಅಸ್ತ್ರ ಪೈಚಾರ್ ತನ್ನ ಮುಡಿಗೇರಿಸಿಕೊಂಡಿತು. ರನ್ನರ್ ಅಪ್ ಪ್ರಶಸ್ತಿಯನ್ನು ಬಾಕಿಲ ತಂಡ ತನ್ನದಾಗಿಸಿಕೊಂಡಿತು.

ಇನ್ನು ವೈಯಕ್ತಿಕ ಬೆಸ್ಟ್ ಬೌಲರ್ ಅಶ್ರಫ್ (ಅಸ್ತ್ರ ಪೈಚಾರ್), ಬೆಸ್ಟ್ ಬ್ಯಾಟ್ಸ್‌ಮನ್ ಕಲಂದರ್ ಬಾಕಿಲ (ಬ್ರದರ್ಸ್ ಬಾಕಿಲ), ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ವಿನಯ್ (ಅಸ್ತ್ರ ಪೈಚಾರ್), ಬೆಸ್ಟ್ ಫೀಲ್ಡರ್ ಆರಿಫ್ ಬಾಕಿಲ (ಬ್ರದರ್ಸ್ ಬಾಕಿಲ), ಮ್ಯಾನ್ ಆಫ್ ದಿ ಸೀರಿಸ್ ಆರಿಫ್ ಪೈಚಾರ್ (ಅಸ್ತ್ರ ಪೈಚಾರ್), ಪಡೆದುಕೊಂಡರು. ಪಂದ್ಯಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಪ್ರಶಾಂತ್ ರೈ ಮರ್ವಂಜ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರು ಸುಳ್ಯ ತಾಲೂಕು & ವಿಷ್ಣು ಗ್ರೂಪ್ ಮಾಲಕರು ವಹಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸುಜಿತ್ ರೈ ಪಟ್ಟೆ ಎಣ್ಣೂರು, ಶ್ರೀ ಜಮಾಲ್ ಕೆ.ಎಸ್ ಬೆಳ್ಳಾರೆ, ಶ್ರೀ ಆರಿಫ್ ಇಂಜಿನಿಯರ್ , ಶ್ರೀ ರಹೀಮ್ ಎಂ.ಆರ್, ಶ್ರೀ ಪ್ರಸಾದ್ ಆಚಾರ್ಯ, ಶ್ರೀ ರಝಾಕ್ ಹಾಜಿ ಪಾಲ್ತಾಡ್ , ಶ್ರೀ ಯತೀಂದ್ರ ಅಡ್ಯಾರ್, ಶ್ರೀ ಪ್ರದೀಪ್ ಡಿ. ದಾಸರಮಜಲು, ಶ್ರೀ ಕಲಂದರ್ ಕಂದು, ಶ್ರೀ ಪವಾಝ್ ಚೆನ್ನಾರ್, ಶ್ರೀ ಯಹಿಯ ಬೆಳ್ಳಾರೆ, ಶ್ರೀ ಹನೀಫ್ ಪಾಲ್ತಾಡ್, ಶ್ರೀ ಹಾಶಿರ್ ಎ.ಬಿ, ಶ್ರೀ ಶಾಕಿರ್ ಕಂಚಿಲ್ಪಾಡಿ ಉಪಸ್ಥಿತರಿದ್ದರು.



