ಸುಳ್ಯ: ಜಾಲ್ಸೂರು ಗ್ರಾಮದ ಬೋಳುಬೈಲಿನಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ‘ಪೀಸ್ ಸ್ಕೂಲ್ ಸುಳ್ಯ ತನ್ನ 10ನೇ ವರ್ಷದ ಮೈಲಿಗಲ್ಲನ್ನು ತಲುಪಿದ್ದು, ಇದರ ಪ್ರಯುಕ್ತ “10 ಔರಾ” (10 AURA) ದಶಮಾನೋತ್ಸವವನ್ನು ಹಮ್ಮಿಕೊಂಡಿದೆ.

​ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ರಿಸೆಟ್ ಇಸ್ಲಾಮಿಕ್ ಸ್ಕೂಲ್ ಮತ್ತು ರಿಸೆಟ್ ಅರೇಬಿಕ್ ಮದ್ರಸ ವಿಭಾಗಗಳನ್ನು ಹೊಂದಿರುವ ಈ ಸಂಸ್ಥೆಯು, ತನ್ನ ಶೈಕ್ಷಣಿಕ ಪಯಣದ “10 ವರ್ಷಗಳ ಶ್ರೇಷ್ಠತೆ”ಯನ್ನು (10 Years of Excellence) ಈ ಕಾರ್ಯಕ್ರಮದ ಮೂಲಕ ಆಚರಿಸಿಕೊಳ್ಳುತ್ತಿದೆ.

ಕಾರ್ಯಕ್ರಮವು ಇದೇ ಬರುವ ಡಿಸೆಂಬರ್ 30, 2025 ರಂದು ನಡೆಯಲಿದ್ದು, ಸಂಜೆ 4:30 ರಿಂದ ರಾತ್ರಿ 10:30 ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ​ಈ ವಿಶೇಷ ಸಂಭ್ರಮಾಚರಣೆಗೆ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಸಮಸ್ತರನ್ನು ಸ್ವಾಗತಿಸಿದ್ದಾರೆ.

Leave a Reply

Your email address will not be published. Required fields are marked *