ಕಲ್ಲುಗುಂಡಿ: ಕೀಲಾರು ಫ್ರೆಂಡ್ಸ್ ಕ್ಲಬ್ ಹಾಗೂ ಯಶಸ್ವಿ ಕಲ್ಲುಗುಂಡಿ ಇವರ ಜಂಟಿ ಆಶ್ರಯದಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಕಲ್ಲುಗುಂಡಿ ಪ್ರೀಮಿಯರ್ ಲೀಗ್’ (KPL) ಸೀಸನ್-9 ಕ್ರಿಕೆಟ್ ಪಂದ್ಯಾಟದ ಆಟಗಾರರ ಹರಾಜು ಪ್ರಕ್ರಿಯೆಯು ಡಿ.29ರಂದು ಕಲ್ಲುಗುಂಡಿ ಗ್ರಾಮ ಪಂಚಾಯತ್ ಹಾಲ್‌ನಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.

ಈ ಬಾರಿಯ ಕೆಪಿಎಲ್ ಸೀಸನ್-9 ಕ್ರೀಡಾಕೂಟದಲ್ಲಿ ಒಟ್ಟು 12 ತಂಡಗಳು ಸೆಣಸಾಡಲಿವೆ. ಹರಾಜು ಪ್ರಕ್ರಿಯೆಯಲ್ಲಿ 24 ಐಕಾನ್ ಆಟಗಾರರು ಸೇರಿದಂತೆ ಒಟ್ಟು 120 ಆಟಗಾರರನ್ನು ವಿವಿಧ ತಂಡಗಳು ಖರೀದಿಸಿದವು.

ಈ ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೆಲ್, ಮಾಜಿ ಅಧ್ಯಕ್ಷರಾದ ಶ್ರೀ ಜಿ.ಕೆ ಹಮೀದ್ ಮತ್ತು ಪ್ರಮುಖರಾದ ಶ್ರೀ ಕಿಶೋರ್ ಬಿ.ಎಸ್ ಅವರು ಉಪಸ್ಥಿತರಿದ್ದು, ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಬಹುನಿರೀಕ್ಷಿತ ಕೆಪಿಎಲ್ ಸೀಸನ್-9 ಕ್ರಿಕೆಟ್ ಪಂದ್ಯಾಟವು ಬರುವ ಫೆಬ್ರವರಿ 7 ಮತ್ತು 8 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *