ಸುಳ್ಯ: ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ (ರಿ.) (ಭಾರತೀಯ ಮಜ್ದೂರ್ ಸಂಘ ಸಂಯೋಜಿತ) ಇದರ ವತಿಯಿಂದ ಸಂಘದ ಎಲ್ಲಾ ಸದಸ್ಯರ ಹಾಗೂ ತಾಲೂಕಿನಾದ್ಯಂತ ಸಂಘವನ್ನು ಪ್ರೋತ್ಸಾಹಿಸುತ್ತಿರುವ ಎಲ್ಲಾ ಹಿತೈಷಿ ಬಂಧುಗಳ ಶ್ರೇಯೋಭಿವೃದ್ಧಿಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

​ದೇವರಲ್ಲಿ ಮಹಾಪೂಜೆ ಮತ್ತು ಹಣ್ಣುಕಾಯಿ ಸಮರ್ಪಿಸಿ, ಸಂಘದ ಸರ್ವ ಸದಸ್ಯರ ಪರವಾಗಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಉಪಸ್ಥಿತರಿದ್ದ ಗಣ್ಯರು:

ಈ ಸಂದರ್ಭದಲ್ಲಿ ಸಂಘದ ಪ್ರಮುಖ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು:

  • ಉಪಾಧ್ಯಕ್ಷರು: ಪ್ರಶಾಂತ್ ಭಟ್
  • ಪ್ರಧಾನ ಕಾರ್ಯದರ್ಶಿ: ನಾರಾಯಣ ಎಸ್. ಎಂ. (ಶಾಂತಿನಗರ)
  • ಕೋಶಾಧಿಕಾರಿ: ರವಿ ಎಸ್.
  • ಮಾಜಿ ಅಧ್ಯಕ್ಷರು: ವಿಜಯ ಕುಮಾರ್ ಉಬರಡ್ಕ
  • ಜತೆ ಕಾರ್ಯದರ್ಶಿ: ಸುರೇಂದ್ರ ಕಾಮತ್ (ಜಯನಗರ)

ನಿರ್ದೇಶಕರು ಹಾಗೂ ಸದಸ್ಯರು:

ಜನಾರ್ದನ, ವೇಣುಗೋಪಾಲ ನಾಯರ್, ಶಂಕರ, ಪ್ರದೀಪ, ಬಾನು ಪ್ರಕಾಶ್, ಲೋಕೇಶ್, ಚಾಮಯ್ಯ, ಚಂದ್ರಶೇಖರ ಮರ್ಕಂಜ, ರಾಧಾಕೃಷ್ಣ, ವಸಂತ, ನಿತ್ಯಾನಂದ, ಮೋಹನ ಮಾಂಗಲ್ಯ, ಬಾಲಕೃಷ್ಣ, ಪ್ರವೀಣ್ ಕಡೋಡಿ ಹಾಗೂ ಇತರ ಚಾಲಕ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *