ಸುಳ್ಯ: ತಾಲೂಕಿನ ಬಾಳಿಲ ಗ್ರಾಮದ ಅತ್ತಿಕ್ಕರಮಜಲು-ಪಾಜಪಳ್ಳ ಮುಹಿಯದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಹಝ್ರತ್ ವಲಿಯುಲ್ಲಾಹಿ ಸಯ್ಯದ್ ಹುಸೈನ್ ಆಟಕ್ಕೋಯ ತಂಙಳ್ ಅಲ್ ಮುಶೈಖಿ (ರ.ಅ) ಅವರ ಹೆಸರಿನಲ್ಲಿ ನಡೆಯುವ ಉರೂಸ್ ಸಮಾರಂಭ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮವು 2026ರ ಜನವರಿ ತಿಂಗಳಲ್ಲಿ ಜರಗಲಿದೆ.

ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಈ ಉರೂಸ್ ಸಮಾರಂಭದ ಅಂಗವಾಗಿ, 2026 ಜನವರಿ 01, 02 ಮತ್ತು 03 ರಂದು (ಮೂರು ದಿನಗಳ ಕಾಲ) ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಈ ದಿನಗಳಲ್ಲಿ ಪ್ರತಿದಿನ ಸಂಜೆ ಮಗ್ರಿಬ್ ನಮಾಜಿನ ಬಳಿಕ (6:30 pm) ಪ್ರಮುಖ ವಿದ್ವಾಂಸರು ಹಾಗೂ ಖ್ಯಾತ ವಾಗ್ಮಿಗಳಿಂದ ಧಾರ್ಮಿಕ ಮತ ಪ್ರವಚನ ನಡೆಯಲಿದೆ
ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



