
ಇಂದು ಬೆಳಿಗ್ಗೆ ಎ.ಬಿ.ವಿ.ಪಿ. ವತಿಯಿಂದ ಯಿಂದ ನಡೆಸಿದ ಪ್ರತಿಭಟನೆ ನಮಗೆ ಅಚ್ಚರಿ ತಂದಿದೆ. ಮತ್ತು ಹಾಸ್ಯಾಸ್ಪದವಾಗಿದೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ಸುಳ್ಯ ತಾಲೂಕಿನ ಹೆಚ್ಚಿನ ಪ್ರದೇಶಗಳಿಗೆ ಬಸ್ಸಿನ ವ್ಯವಸ್ಥೆಗಳೇ ಇರಲಿಲ್ಲ. 2023 ರಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರಕಾರ ಬಂದ ನಂತರ ರಾಜ್ಯದಲ್ಲಿ, ಜಿಲ್ಲೆಯಲ್ಲಿ ಹಾಗು ತಾಲೂಕುಗಳಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಸಮಿತಿಗಳ ರಚನೆ ಮಾಡಿರುತ್ತಾರೆ. ಅದರಂತೆ ಸುಳ್ಯದಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ ಇದ್ದು. ನಿರಂತರ ಪಂಚ ಗ್ಯಾರಂಟಿ ಯೋಜನೆಗಳನ್ನು ಶೇ. 100 ರಷ್ಟು ಅನುಷ್ಠಾನ ಗೊಲಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾ ಇದೆ. ಈ ಸಮಿತಿ ಅಸ್ಥಿತ್ವಕ್ಕೆ ಬಂದ ನಂತರ ಸುಳ್ಯ ತಾಲೂಕಿನ ಹಲವು ಭಾಗಗಳಿಗೆ ಬಸ್ಸನ್ನು ಕಲ್ಪಿಸಲಾಗಿದೆ. ಸುಳ್ಯ ಗ್ಯಾರಂಟಿ ಸಮಿತಿಯ ಶಿಪಾರಸ್ಸಿನ ಮೇರೆಗೆ ಬೆಳಗ್ಗೆ ಮತ್ತು ಸಂಜೆ ಸುಳ್ಯ- ಪುತ್ತೂರು ನಡುವೆ ಹೆಚ್ಚುವರಿ 10 ಬಸ್ಸು ಕಲ್ಪಿಸಲಾಗಿದೆ. ಹಾಗು ಬೇಡಿಕೆಗಳಿದ್ದ ಮಡಪ್ಪಾಡಿಯಲ್ಲಿ ತಂಗುವ ಬಸ್ಸು ಈ ಹಿಂದೆ ಸ್ಥಗಿತಗೊಂಡಿರುವುದನ್ನು ಮತ್ತೆ ಪುನರಾರಂಭಿಸಲಾಗಿದೆ. ಮಾರ್ಗ ವಿಸ್ತರಣೆಯಲ್ಲಿ ಸುಳ್ಯ-ಪೇರಾಲು ಬಸ್ಸನ್ನು ಅಡ್ಪಂಗಾಯ ತನಕ ಹಾಗು ಕಲ್ಪನೆ ತನಕ ಇದ್ದ ಬಸ್ಸನ್ನು ಪೊಟ್ರೆ ತನಕ ವಿಸ್ತರಿಸಲಾಗಿದೆ. 30 ವರ್ಷಗಳಿಂದ ಬೇಡಿಕೆ ಇದ್ದ ಆಲೆಟಿ ಗ್ರಾಮದ ಬಡ್ಡಡ್ಕಕ್ಕೆ ಬಸ್ಸು ಚಾಲನೆ ನೀಡಲಾಗಿದೆ. ಸಂಜೆ ಕಂದ್ರಪ್ಪಾಡಿಗೆ ಸ್ಥಗಿತವಾಗಿದ್ದ ಬಸ್ಸನ್ನು ಪುನರಾರಂಭಿಸಲಾಗಿದೆ. ಕಲ್ಮಡ್ಕಕ್ಕೆ ಬಸ್ಸು ಸಂಚಾರ ಪ್ರಾರಂಭಿಸಲಾಗಿದೆ. ಬೆಳಿಗ್ಗೆ ಕೊಯನಾಡಿನಿಂದ ಕೇರಳದ ಕಾಸರಗೋಡಿಗೆ ಬಸ್ಸು ಪ್ರಾರಂಭ ಗೊಂಡಿರುತ್ತದೆ. ಸುಳ್ಯ-ಕೊಡಿಯಾಲಬೈಲು – ದುಗ್ಗಲಡ್ಕ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ಸಂಚರಿಸುವ ಬಸ್ಸಿಗೆ ಚಾಲನೆ ನೀಡಿದ್ದು ರಸ್ತೆ ಸಮಸ್ಯೆಯಿಂದ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ. ಹಿಂದಿನ ಸರಕಾರ ಮಾಡದ್ದನ್ನು ಪ್ರಶ್ನಿಸದ ಇವರು ಈಗಿನ ಸರಕಾರವನ್ನು ಪ್ರಶ್ನಿಸಿ ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ ಮತ್ತು ಇವರ ಪ್ರತಿಭಟನೆ ಕೇವಲ ಪ್ರಚಾರಕ್ಕೆ ಮಾಡುತ್ತಿರುವುದಾಗಿದೆ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ(ಎನ್.ಎಸ್.ಯು.ಐ.) ಸುಳ್ಯ ಇದರ ಅಧ್ಯಕ್ಷ ಹಾಗೂ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಧನುಷ್ ಕುಕ್ಕೇಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.



