ಸುಳ್ಯ: ಇಲ್ಲಿನ ಶಾಂತಿನಗರ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ (ರಿ) ಇದರ ಆಶ್ರಯದಲ್ಲಿ ಪವಿತ್ರವಾದ ‘ಮಾಸಿಕ ಸ್ವಲಾತ್ ಮಜ್ಲಿಸ್’ ಕಾರ್ಯಕ್ರಮವು ಇಂದು (ಜನವರಿ 11, ಆದಿತ್ಯವಾರ) ನಡೆಯಲಿದೆ.

ಕಾರ್ಯಕ್ರಮವು ಸಂಜೆ ಮಗ್ರಿಬ್ ನಮಾಜಿನ ಬಳಿಕ ಶಾಂತಿನಗರದ ನೂರುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಜರುಗಲಿದೆ.
ಕಾರ್ಯಕ್ರಮದ ವಿವರಗಳು:
- ಸ್ವಲಾತ್ ನೇತೃತ್ವ: ಬಹು| ಉಸ್ತಾದ್ ಶಮೀರ್ ಅಹ್ಮದ್ ನಈಮಿ ಪೈಚಾರ್.
- ಮುಖ್ಯ ಪ್ರಭಾಷಣ: ಬಹು| ಉಸ್ತಾದ್ ಅಬ್ದುಲ್ ಖಾದರ್ ಸಖಾಫಿ ಅಲ್-ಕಾಮಿಲಿ ಮುದುಗುಡ.
- ಪ್ರಾಸ್ತಾವಿಕ ಭಾಷಣ: ಬಹು| ಉಸ್ತಾದ್ ಅಬ್ದುರ್ರಶೀದ್ ಝೈನಿ ಪೆರಾಜೆ.
ಈ ಆಧ್ಯಾತ್ಮಿಕ ಸಂಗಮದಲ್ಲಿ ಸರ್ವರಿಗೂ ಆತ್ಮೀಯ ಸ್ವಾಗತವನ್ನು ಕೋರಲಾಗಿದೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದ್ದು, ಕೊನೆಯಲ್ಲಿ ತಬರುಕ್ ವಿತರಣೆ ಇರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



